ಪುತ್ತೂರಿನ ಪ್ರಜ್ಞಾ ಆಶ್ರಮ ಬೀರಮಲೆ ಇಲ್ಲಿ ದಿ: 27/08/2023ನೇ ರವಿವಾರ ನಡೆದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ) ಸಂಸ್ಥೆಯ 7ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ 2023 ಆಗಸ್ಟ್(84ನೇ) ತಿಂಗಳ 2 ಮಾಸಿಕ ಸೇವಾ ಯೋಜನೆಯಲ್ಲಿ ತಲಾ 20,000 ರೂಪಾಯಿಯಂತೆ ಜಿಲ್ಲೆಯ ಇಬ್ಬರು ಅಶಕ್ತರ ಚಿಕಿತ್ಸೆ ವೆಚ್ಚಕ್ಕಾಗಿ ಧನ ಸಹಾಯವನ್ನು ಅತಿಥಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಮತ್ತು ಈಶ್ವರ್ ಮಲ್ಪೆ ಇವರಿಗೆ 2023-2024 ರ ತುಳುನಾಡ ಪೊರ್ಲು ಸೇವಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಸೇವಾ ಸಂಸ್ಥೆಗಲಿಗೆ ಗೌರವಾರ್ಪಣೆ ಕಾರ್ಯಕ್ರಮ ಅನ್ನದಾನ ಸೇವೆ ನಡೆಯಿತು ಈ ಸಂಧರ್ಭದಲ್ಲಿ ಅರ್ಜುನ್ ಭಂಡಾರ್ಕರ್.ಈಶ್ವರ್ ಮಲ್ಪೆ. ಟ್ರಸ್ಟ್ ನ ಅಧ್ಯಕ್ಷರಾದ ವಸಂತ್ ಪೂಜಾರಿ ಮುದಿಮರ ಹಾಗೂ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು