ಕಡಿಯಾಳಿ ಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸಂಪರ್ಕಿಸುವ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಬರುವ ದಿ. ಡಾ. ವಿ. ಎಸ್ ಆಚಾರ್ಯರ ಮನೆ ಹತ್ತಿರದಿಂದ ರಾಜಾಂಗಣ ವಾಹನ ನಿಲುಗಡೆಯವರೆಗೆ ಸಂಪೂರ್ಣ ಹದಗೆಟ್ಟಿದೆ.
ರಸ್ತೆಯ ಉದ್ದಗಲಕ್ಕೂ ಹೊಂಡ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ.
ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಲ್ಲುವುದು ಬೇಸಿಗೆಗಾಲದಲ್ಲಿ ಧೂಳು ಎಳುವ ಪರಿಸ್ಥಿತಿ ಇದೆ.
ನಗರಸಭೆಯ ಅಧಿಕಾರಿಗಳು ಆದಷ್ಟು ಬೇಗ ರಸ್ತೆ ದುರಸ್ತಿ ಕಾರ್ಯ ನಡೆಸಬೇಕೆಂದು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಆಗ್ರಹಿಸಿದ್ದಾರೆ.