ಬ್ರಹ್ಮಶ್ರೀ ನಾರಾಯಣ ಗುರುಗಳು ಶತಶತಮಾನಗಳಿಂದ ತುಳಿತಕ್ಕೊಳಗಾದ ಮಂದಿಯ ಅಭ್ಯುದಯದ ಹರಿಕಾರ. ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ದಿಂದ ಮಾತ್ರ ಸಾಮಾಜಿಕ ಮೌಢ್ಯಗಳನ್ನು ಹೊಡೆದೋಡಿಸಲು ಸಾದ್ಯ ಎಂದ ಅವರ ವೈಜ್ಞಾನಿಕ ಚಿಂತನೆ ವರ್ಣಾಶ್ರಮ ಧರ್ಮದ ವಿರುದ್ಧವಾಗಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.
ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಕಳ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮ ದಿನೋತ್ಸವದಲ್ಲಿ ಮಾತಾಡುತ್ತಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಪ್ರಸ್ಥಾವನೆ ಗೈದು ಮಾತಾಡಿ ಅವರು ಹುಟ್ಟು ಹಾಕಿದ ಸರ್ವಧರ್ಮ ಸಮನ್ವಯತೆಯ ಹಾದಿಯಲ್ಲಿ ನಡೆಯುವುದು ನಮ್ಮೆಲ್ಕರ ಕರ್ತವ್ಯ ಆಗಿದೆ ಎಂದರು.
ಕೆಪಿಸಿಸಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಡಿ.ಆರ್ ರಾಜು, ಡಿಸಿಸಿ ಉಪಾಧ್ಯಕ್ಷ ಸುಧಾಕರ ಕೋಟ್ಯಾನ್, ಕೆಪಿಸಿಸಿ ಕೃಷಿ ಘಟಕದ ಕಾರ್ಯದರ್ಶಿ ಉದಯ ವಿ.ಶೆಟ್ಟಿ, ಮಾಜಿ ಪುರಸಭಾಧ್ಯಕ್ಷ ಸುಭಿತ್ ಕುಮಾರ್,ಕುಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ ಸಂತೋಷ್, ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದಾ ರಾವ್, ಬ್ಲಾಕ್ ಉಪಾಧ್ಯಕ್ಷ ಜೋಜ್೯ ಕ್ಯಾಸಲೀನೋ, ಪುರಸಭಾ ಸದಸ್ಯ ಸೀತಾರಾಮ್ ರಾವ್, ಪಂಚಾಯತ್ ಸದಸ್ಯ ವಿಶ್ವನಾಥ ಭಂಡಾರಿ, ಪಂಚಾಯತ್ ಸದಸ್ಯ ಅನಿಲ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುನೀಲ್ ಕೋಟ್ಯಾನ್, ಸುನೀಲ್ ಭಂಡಾರಿ, ಐವಾನ್ ಮಿರಾಂದ, ರಾಘವ ದೇವಾಡಿಗ, ಪ್ರಕಾಶ ಆಚಾರ್ಯ, ಪ್ರವೀಣ್ ಸುವರ್ಣ, ಮಹಿಳಾ ಕಾರ್ಯದರ್ಶಿ ಶೋಭಾ, ಆಶಾ ಶೆಟ್ಟಿ,ಯಶೋಧ ಆಚಾರ್ಯ, ಜೋಕಿಮ್ ಪಿಂಟೋ, ದೀಪಕ್, ಸತೀಷ್ ರಾವ್, ಪ್ರವೀಣ್ ಮಾಭಿಯಾನ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಅನಿತಾ ಡಿಸೋಜ ವಂದನಾರ್ಪಣೆ ಗೈದರು.