ಉಡುಪಿ : ಜಿಲ್ಲಾ ಪಂಚಾಯತ್ ಶಿಕ್ಷಣ ಇಲಾಖೆ ಉಡುಪಿ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ವಲಯ ಹಾಗೂ ಸಂತ ಲಾರೆನ್ಸ್ ಅನುದಾನಿತ ಪ್ರೌಢ ಶಾಲೆ ಅತ್ತೂರು,ಕಾರ್ಕಳ,ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ತಾಲೂಕು ಮಟ್ಟದ ಪ್ರೌಢಾಲಾ ವಿಭಾಗದ ತ್ರೋ ಬಾಲ್ ಪಂದ್ಯಾಟ ಅತ್ತೂರು ಸಂತ ಲಾರೆನ್ಸ್ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಿತು.
ಕಾರ್ಕಳ ಲೆಕ್ಕ ಪರಿಶೋಧಕ ಕೆ. ಕೆ. ಕಾಮತ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲೆಯ ಸಂಚಾಲಕ ರೆ.ಫಾದರ್ ಆಲ್ಬನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೋಭಾ ಉಪಾಧ್ಯಕ್ಷ ನಿತಿನ್ ಸಾಲಿನ್ ಉಪಸ್ಥಿತರಿದ್ದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಉಪಾಧ್ಯಾಯ ಸ್ವಾಗತಿಸಿ ಗಣಿತ ಶಿಕ್ಷಕ ಶ್ರೀನಿವಾಸ ಅಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಹಿಂದಿ ಶಿಕ್ಷಕಿ ಜೆನಿಫರ್ ಡಿಸಿಲ್ವಾ ಧನ್ಯವಾದವಿತ್ತರು