ಉಡುಪಿ: ಇಲ್ಲಿನ ಮಲ್ಪೆ ಕಡಲತೀರದಲ್ಲಿ ಗುರುವಾರ ಆ.31ರಂದು ಅಪಾರ ಸಂಖ್ಯೆಯಲ್ಲಿ ಮೀನುಗಾರರು ಸಮುದ್ರ ‘ಸಮುದ್ರ ಪೂಜೆ’ ಸಲ್ಲಿಸಿದರು.
ಸಮಸ್ತ ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ಗುರುವಾರ ಮಲ್ಪೆಯ ವಡಬಾಂಡೇಶ್ವರ ಕಡಲ ಕಿನಾರೆಯಲ್ಲಿ ಸಮುದ್ರ ಪೂಜೆ ಯನ್ನು ನೆರವೇರಿಸಲಾಯಿತು.
ಮೀನುಗಾರಿಕಾ ಸಮಯ ಅಧಿಕೃತ ವಾಗಿ ಆರಂಭಗೊಳ್ಳುವ ಸಂದರ್ಭ ದಲ್ಲಿ ಮೀನುಗಾರರು ತಲೆತಲಾಂತರದಿಂದ ಆಚರಿಸಿಕೊಂಡು ಬಂದಂತೆ ಹುಣ್ಣಿಮೆಯ ದಿನದಂದು ಸಮುದ್ರಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಪೂಜೆ ಬಳಿಕವೇ ಮೀನುಗಾರರು ಕಡಲಿಗೆ ಇಳಿದು ಅಧಿಕೃತ ಮೀನುಗಾರಿಕೆ ನಡೆಸುತ್ತಾರೆ.