ಕಾರ್ಕಳ ಪುರಸಭೆ ವ್ಯಾಪ್ತಿಯ ಆನೆಕೆರೆ ಮಸೀದಿಯ ಬಳಿ ಇರುವ ಅಪಾಯಕಾರಿ ಮರವು ಮಂಗಳವಾರ ನಡೆಯಿತು ಬೃಹತ್ಕಾರದ ಮರದ ಕೊಂಬೆಗಳನ್ನು ತೆರವು ಗೊಳಿಸುವ ಕಾರ್ಯವನ್ನು ಅರಣ್ಯ ಇಲಾಖೆಯ ನೇತೃತ್ವದಲ್ಲಿ ನಡೆಸಿದರು
ಪ್ರತಿನಿತ್ಯ ನೂರಾರು ವಾಹನಗಳು ಮತ್ತು ಸಾವಿರಾರು ನಾಗರಿಕರು ಸಂಚರಿಸುವ ರಸ್ತೆಯ ಪಕ್ಕದಲ್ಲಿ ತುಂಬಾ ಹಳೆಯದಾದ ಬೃಹತ್ಕಾರದ ಮರ ತೀರ ಅಪಾಯಕಾರಿಯಾಗಿತ್ತು.
ಸಾರ್ವಜನಿಕರಿಂದ ಮನವಿಗಳು ಪುರಸಭೆಗೆ ಮತ್ತು ಅರಣ್ಯ ಇಲಾಖೆಗೆ ಸಲ್ಲಿಸಲ್ಪಟ್ಟಿದ್ದವು. ಆಗಸ್ಟ್ 29ರಂದು ಅರಣ್ಯ ಇಲಾಖೆಯ ಮುತವರ್ಜಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಕಾರ್ಮಿಕರು ಕೊಂಬೆಗಳನ್ನು ಕಡಿದು ತೆರವುಗೊಳಿಸಿದರು. ಮೆಸ್ಕಾಂ ಇಲಾಖೆ ಸಿಬ್ಬಂದಿ ಕಾರ್ಕಳ ಆರಕ್ಷಕ ಠಾಣೆಯ ಸಿಬ್ಬಂದಿಗಳು ಸಹಕರಿಸಿದ್ದರು.