ಈಜು ಸ್ಪರ್ಧೆಯಲ್ಲಿ ಗೋಪಾಲ್ ಖಾರ್ವಿ ಚಿನ್ನದ ಪದಕ ಭೂತಾನ್‌ನಲ್ಲಿ ನಡೆದ ಸೌತ್ ಏಷ್ಯನ್ ಫೆಡರೇಷನ್ ಆಫ್ ಆಲ್ ಸ್ಪೋರ್ಟ್ಸ್ ಸಫಾಸ್ ಇವರು ಆಯೋಜಿಸಿದ ಇಂಟರ್ನ್ಯಾಷನಲ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನ ಈಜು ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಗುಂಡ್ಮಿ ನಿವಾಸಿ ಗೋಪಾಲ್ ಖಾರ್ವಿ ಕೋಡಿ-ಕನ್ಯಾನ ಇವರು 100ಮೀ ಫ್ರೀಸ್ಟೈಲ್ ಚಿನ್ನದ ಪದಕ, 200ಮೀ ಫ್ರೀಸ್ಟೈಲ್ ಚಿನ್ನದ ಪದಕ ಪಡೆದಿದ್ದಾರೆ.
ಒಟ್ಟು 2 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಉಡುಪಿಯ ಅಜ್ಜರಕಾಡು ಈಜು ಕೊಳದ ತರಬೇತುದಾರರಾಗಿರುತ್ತಾರೆ.