ಪಡುಬಿದ್ರಿ : ಎಲ್ಲೂರು ಗ್ರಾಮದ ತಜೆ ಎಂಬಲ್ಲಿರುವ ಬ್ರಹ್ಮ ಶ್ರೀ ನಾರಾಯಣಗುರು ಮಂದಿರದ ಕಾಣಿಕೆ ಡಬ್ಬಿಯನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ. ನಿನ್ನೆ ಆನಂದ ಪೂಜಾರಿ ಎಂಬುವವರು ಮಂದಿರವನ್ನು ಸ್ವಚ್ಚಗೊಳಿಸಲು ಮಂದಿರಕ್ಕೆ ಬಂದಾಗ ಕಾಣಿಕೆ ಡಬ್ಬಿ ಕಳ್ಳತನ ನಡೆಸಿರೋದು ಗಮನಕ್ಕೆ ಬಂದಿದೆ.
ಕಳವಾದ ಕಾಣಿಕೆ ಡಬ್ಬಿಯಲ್ಲಿ 15, 000 ರೂ. ಇರುತ್ತದೆ. ಎಂಬುದಾಗಿ ಗುಣಕರ ಪುಜಾರಿ ಎಂಬವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.