ಬಂಟ್ವಾಳ : ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಜಕ್ರಿಬೆಟ್ಟು ಎಂಬಲ್ಲಿ ಅಪರಿಚಿತ ವ್ಯಕ್ತಿಯೋರ್ವ ಹಂಚಿನ ಮನೆಯೊಳಗೆ ಬಚ್ಚಲು ಕೋಣೆಯಲ್ಲಿ ರಾತ್ರಿ ವೇಳೆ ಯುವತಿಯೋರ್ವಳು ಸ್ನಾನ ಮಾಡುತ್ತಿರುವ ವೇಳೆ ಗೋಡೆಯ ಸೆರೆಯ ಮಧ್ಯೆ ಮೊಬೈಲ್ ಮೂಲಕ ಸ್ನಾನ ಮಾಡುತ್ತಿರುವುದನ್ನು ಸೆರೆ ಹಿಡಿಯುವುದು ಗಮನಕ್ಕೆ ಬಂದಿದೆ. ಯುವತಿ ಇದನ್ನು ಕಂಡು ಜೋರಾಗಿ ಬೊಬ್ಬೆ ಹಾಕಿದ್ದು, ಅಪರಿಚಿತ ಆರೋಪಿ ವ್ಯಕ್ತಿ ಅಲ್ಲಿಂದ ಓಡಿಹೋಗಿದ್ದ.
ಯುವತಿಯ ಬೊಬ್ಬೆ ಕೇಳಿ ಇವಳ ತಾಯಿ ಹಾಗೂ ನೆರೆಮನೆಯವರು ಓಡಿ ಬಂದು ವಿಷಯ ಕೇಳಿ,ಓಡಿಹೋದ ವ್ಯಕ್ತಿಯ ಹುಡುಕಾಟ ನಡೆಸಿದ್ದಾರೆ.ಆದರೆ ಆತನ ಪತ್ತೆಯಾಗಿರಲಿಲ್ಲ. ಘಟನೆಯ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಣ ಮಾಡಿದ ಆರೋಪಿಯನ್ನು ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್.ಐ.ರಾಮಕೃಷ್ಣ ನೇತೃತ್ವದ ತಂಡ ವಶಕ್ಕೆ ಪಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಗ್ರಾರ್ ನಿವಾಸಿ ಜಗದೀಪ್ ಆಚಾರ್ಯ ಎಂಬವನನ್ನು ಪೋಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಘಟನೆ ಕುರಿತು ಪ್ರಕರಣ ದಾಖಲಾದ ಬೆನ್ನಲ್ಲೆ ಪೋಲೀಸರು ಕಾರ್ಯಚರಣೆ ಪ್ರಾರಂಭಿಸಿದ್ದರು. ಸಂಶಯದ ಮೇಲೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಈತ ಸತ್ಯ ಬಾಯಿಬಿಟ್ಟಿದ್ದಾನೆ ಎಂಬುದು ತಿಳಿದು ಬಂದಿದೆ.