ಪಡುಬಿದ್ರೆ : ಸ್ಕೂಟರ್‌ಗೆ ಬುಲೆಟ್ ಟ್ಯಾಂಕರ್ ಢಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಜಾರ್ಖಂಡ್ ಮೂಲದ ಕೂಲಿ ಕಾರ್ಮಿಕ ಸದ್ದಾಂ ಅನ್ಸಾರಿ(24) ಸಾವನ್ನಪ್ಪಿದ ಘಟನೆ .ಕನ್ನಂಗಾರ್ ಜಂಕ್ಷನ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ
ಕನ್ನಂಗಾರಿನಿಂನ ಪಡುಬಿದ್ರಿಯತ್ತ ಬರುತ್ತಿದ್ದ ಸ್ಕೂಟರ್‌ಗೆ ಮಂಗಳೂರು ಕಡೆಯಿಂದ ಉಡುಪಿಯತ್ತ ಹೋಗುತ್ತಿದ್ದ ಬುಲೆಟ್ ಟ್ಯಾಂಕರ್ ಎಡಬದಿ ತಾಗಿ ಅಪಘಾತವಾಗಿತ್ತು
ರಸ್ತೆಗಪ್ಪಳಿಸಲ್ಪಟ್ಟ ಸಹ ಸವಾರ ಸದ್ದಾಂ ಅನ್ಸಾರಿ ಟ್ಯಾಂಕರಿನ ಹಿಂಬದಿ ಚಕ್ರಕ್ಕೆ ಸಿಲುಕಿ ಕಾಲಿಗೆ ತೀವ್ರ ಗಾಯಗಳಾಗಿದ್ದವು. ಆ ಕೂಡಲೇ ಮುಕ್ಕದ ಖಾಸಗಿ ಆಸ್ಪತ್ರೆಗೆ ಒಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸ್ಕೂಟರ್ ಸವಾರ ಪಾಣಾಪಾಯವಿಲ್ಲದೇ ಪಾರಾಗಿದ್ದಾರೆ.