ಕಾರ್ಕಳ : ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಮತ್ತು ಬಿ. ಇ. ಯಂ ಶಿಕ್ಷಣ ಸಂಸ್ಥೆ ಬೈಲೂರು ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಕಾರ್ಕಳ ವೃತ್ತಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ವಾಲಿಬಾಲ್ ಪಂದ್ಯಾಟವು ಬೈಲೂರು ಸ. ಪ. ಪೂ. ಕಾಲೇಜಿನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಬಿ. ಇ. ಯಂ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಜಯ್ ಜತ್ತನ್ನ ವಹಿಸಿದ್ದರು. ನೀರೆ ಗ್ರಾಮ ಪಂ. ಅಧ್ಯಕ್ಷ ಸಚ್ಚಿದಾನಂದ ಪ್ರಭು ಪಂದ್ಯಾಟವನ್ನು ಉದ್ಘಾಟಿಸಿದರು. ಕ್ರೀಡಾಂಗಣವನ್ನು ಲಯನ್ ಸತೀಶ್ ಶೆಟ್ಟಿ ಉದ್ಘಾಟಿಸಿದರು.