ಕೊರಂಗ್ರಪಾಡಿ ವ್ಯವಸಾಯಿಕ ಸಹಕಾರಿ ಸಂಘದ ಬೈಲೂರು ಶಾಖೆಯ ವ್ಯವಸ್ಥಾಪಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಲೆವೂರಿನಲ್ಲಿ ನಡೆದಿದೆ. ಅಲೆವೂರು ನಿವಾಸಿ ಮಂಜೇಶ್ ಕುಮಾರ್ (49) ಮನೆಯಲ್ಲಿ ಡೆತ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ಕಳೆದ ಹಲವು ಸಮಯಗಳಿಂದ ಅನಾರೋಗ್ಯ ಇದ್ದ ಇವರು ಇತ್ತೀಚಿಗೆ ಗುಣಮುಖರಾಗಿ ಕೊರಂಗ್ರಪಾಡಿ ವ್ಯವಸಾಯಿಕ ಸಹಕಾರಿ ಸಂಘದ ಬೈಲೂರು ಶಾಖೆಯ ವ್ಯವಸ್ಥಾಪಕರಾಗಿ ಪದೋನ್ನತಿ ಪಡೆದಿದ್ದರು. ಮಣಿಪಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ