ಮಣಿಪಾಲ: ಆನ್‌ಲೈನ್ ಲೋನ್ ತೆಗೆದುಕೊಂಡ ಪರಿಣಾಮ ಮರುಪಾವತಿಗಾಗಿ ಬಂದ ಕರೆಗಳಿಗೆ ಬೆದರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಳಿಗಾ ಫಿಶ್‌ನೆಟ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ ಶಿವಳ್ಳಿಯ ರಾಘವೇಂದ್ರ ಎ. ಶಾನುಭಾಗ್(49) ಆತ್ಮಹತ್ಯೆ ಮಾಡಿಕೊಂಡವರು.
ಇವರು ಆನ್‌ಲೈನ್‌ನಲ್ಲಿ ಲೋನ್ ತೆಗೆದುಕೊಂಡಿದ್ದು, ಇದರಿಂದ ಅವರಿಗೆ ಪದೇ ಪದೇ ಫೋನ್ ಕರೆಗಳು ಬರುತ್ತಿದ್ದವು. ಈ ಕಾರಣಕ್ಕೆ ಜುಗುಪ್ಸೆಗೊಂಡ ಅವರು ಹುಡ್ಕೊ ಕಾಲನಿಯಲ್ಲಿರುವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.