ಉಡುಪಿ: “ಆಸ್ಟಿಯೊಪೊರೋಸಿಸ್” ಅಂದರೆ ಮೂಳೆ ತೆಳುವಾಗಿ ಮತ್ತು ದುರ್ಬಲವಾಗಿ ಮೂಳೆ ಮುರಿತಕ್ಕೆ ಕಾರಣವಾಗುವ ಒಂದು ಸದ್ದಿಲ್ಲದ ಸ್ಥಿತಿ. ದೇಹವು ಹೊಸ ಮೂಳೆಗಳ ರಚನೆ ರೂಪಿಸಲು ವಿಫಲವಾದರೆ ಅಥವಾ ಹಳೆಯ ಮೂಳೆಗಳು ಹೆಚ್ಚಿನ ಸಂಖ್ಯಯಲ್ಲಿ ನಾಶವಾದರೆ ಈ ರೋಗವು ಸಂಭವಿಸುತ್ತದೆ. ಈ ರೋಗವು ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ, ಆದರೆ ಮಾಹಿತಿಯ ಕೊರತೆಯ ಕಾರಣದಿಂದಾಗಿ ಚಿಕಿತ್ಸೆ ತೆಗೆದುಕೊಳ್ಳುವುದಿಲ್ಲ ಎನ್ನುವುದು ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿಯ ಮೂಳೆ ವಿಭಾಗದ ಮುಖ್ಯಸ್ಥರಾದ ಡಾ. ರಾಜಾರಮ್ ಪೈ ಅವರ ಅಭಿಪ್ರಾಯ.
ಆಸ್ಟಿಯೊಪೊರೋಸಿಸ್ ಪರೀಕ್ಷೆಯನ್ನು ದೇಹದ ಮೇಲೆ ಯಾವುದೇ ಗಾಯವಿಲ್ಲದೇ ಅತ್ಯಂತ ಸುಲಭದಲ್ಲಿ ಕಂಡು ಹಿಡಿಯುವ ವಿಧಾನವೇ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷೆ. ಪರೀಕ್ಷೆಯ ನಂತರ ತಜ್ಞರು ರೋಗ ನಿರ್ಣಯ ಮಾಡಿ, ಸಲಹೆಗಳನ್ನು ನೀಡುತ್ತಾರೆ. ಮಹಿಳೆಯರು ಅದರಲ್ಲೂ 50 ವರ್ಷ ದಾಟಿದವರು ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
ಡಾ ಟಿ.ಎಂ.ಎ.ಪೈ ಆಸ್ಪತ್ರೆ ಉಡುಪಿಯ ವೈದ್ಯಕೀಯ ಅಧೀಕ್ಷಕರಾದ ಡಾ. ಶಶಿಕಿರಣ್ ಉಮಾಕಾಂತ್ ಅವರು, ಆಸ್ಪತ್ರೆಯ ಮೂಳೆ ವಿಭಾಗದಲ್ಲಿ ಮಂಗಳವಾರ, 29ನೇ ಆಗಸ್ಟ್ 2023 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ಉಚಿತ ಮೂಳೆಯ ಖನಿಜಾಂಶಗಳ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಏರ್ಪಡಿಸಲಾಗಿದೆ. 40 ವರ್ಷ ದಾಟಿದವರು ಈ ಒಂದು ಶಿಬಿರಕ್ಕೆ ಅವರ ಹೆಸರನ್ನು ನೋಂದಾಯಿಸಬಹುದು. ಶಿಬಿರಕ್ಕೆ ಮೊದಲು ಬಂದವರಿಗೆ ಮತ್ತು 100 ಶಿಬಿರಾರ್ಥಿಗಳಿಗೆ ಮಾತ್ರ ಅವಕಾಶ ಇರುವುದು. ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ 0820-2526501 ಮತ್ತು ದೂರವಾಣಿ ವಿಸ್ತರಣೆ ಸಂಖ್ಯೆ 2164ಗೆ ಸಂಪರ್ಕಿಸಬಹುದು ಎಂದು ತಿಳಿಸಿ ಉಡುಪಿ ಮತ್ತು ಸುತ್ತಮುತ್ತಲಿನ ಜನರಲ್ಲಿ ಈ ಉಚಿತ ಶಿಬಿರದ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.