ಕಾರವಾರ : ಮನೆಯ ಮುಂದೆ ಆಟವಾಡುತ್ತಾ ಮಗುವೊಂದು ಬಾವಿಗೆ ಬಿದ್ದು ಮೃತಪಟ್ಟ ದುರ್ಘಟನೆ ಕಾರವಾರದ ಹರಿದೇವನಗರದಲ್ಲಿ ನಡೆದಿದೆ
ಮಣ್ಣಿನ ಮುದ್ದೆಯನ್ನು ಗಣಪ ಎಂದು ಬಾವಿಗೆ ಹಾಕಲು ಹೋಗಿ ಆಯ ತಪ್ಪಿ ಬಾವಿಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಸೂರಜ್ ಬಂಟ್ ಮತ್ತು ವಿನುತಾ ಅವರ ಮೂರು ವರ್ಷದ ಮಗಳು ಸ್ತುತಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು
ನಗರಸಭೆಗೆ ಸೇರಿದ ಬಾವಿ ಕಟ್ಟೆ ಸುರಕ್ಷಿತ ಎತ್ತರದಲ್ಲಿರದ ಕಾರಣ ಮಗು ಬಾವಿಗೆ ಬಿದ್ದಿದೆ ಎನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.