ಬೆಂಗಳೂರು : ರಾಜ್ಯದಲ್ಲಿ ಈ ವರ್ಷದಿಂದಲೇ 262 ಹೊಸ ಸರ್ಕಾರಿ ಪ್ರೀ ಪ್ರೈಮರಿ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. 2023-24ನೇ ಸಾಲಿನಂದಲೇ ಪ್ರೀ ಪ್ರೈಮರಿ ಶಾಲೆಗಳು ಆರಂಭಗೊಳ್ಳಲಿದೆ.
ಇನ್ನೂ ವಿಶೇಷ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಎಲ್ ಕೆಜಿ ವಿಭಾಗವನ್ನು ಮಾತ್ರ ಆರಂಭಿಸುವಂತೆ ಹಾಗೂ ಎಲ್ ಕೆಜಿಗೆ 4 ರಿಂದ 5 ವರ್ಷದೊಳಗಿನ ಮಕ್ಕಳನ್ನು ಮಾತ್ರ ದಾಖಲಿಸುವಂತೆ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.
ಪ್ರೀ ನರ್ಸರಿ ಶಾಲೆಗಳಲ್ಲಿ ಕನಿಷ್ಠ 20 ಮಕ್ಕಳನ್ನು ಮತ್ತು ಗರಿಷ್ಠ 30 ಮಕ್ಕಳನ್ನು ಮಾತ್ರ ದಾಖಲಿಸಿಕೊಳ್ಳಬೇಕೆಂದು ಸಮಗ್ರ ಶಿಕ್ಷಣ ಕರ್ನಾಟಕದ ಯೋಜನಾ ನಿರ್ದೇಶಕರು ಆದೇಶದಲ್ಲಿ ತಿಳಿಸಿದ್ದಾರೆ