ಕಾರ್ಕಳ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾರ್ಯಕ್ರಮ ಇಲ್ಲಿ ಬುಧವಾರದಂದು ದಾನಿಗಳ ವಿವಿಧ ಸವಲತ್ತುಗಳ ವಿತರಣ ಸಮಾರಂಭ ನಡೆಯಿತು. ರೋಟರಿ ಕ್ಲಬ್ ಕಾರ್ಕಳದ ವತಿಯಿಂದ ಶಾಲೆಯ ನಲಿ ಕಲಿ ತರಗತಿ ಮೂರು ಟೇಬಲ್ ಹಾಗೂ 20 ಕುರ್ಚಿಗಳು ಬಾಲಾಜಿ ಜುವೆಲ್ಲರ್ಸ್ ಕಾರ್ಕಳದ ಮಾಲಕರಾದ ಪ್ರಭಾಕರ್ ಪಾಟೀಲ್ ಹಾಗೂ ಶ್ರೀಮತಿ ಶರ್ಮಿಳ ಸಿಂಧೆ ದಂಪತಿಗಳು ಧ್ವನಿವರ್ಧಕ ಮತ್ತು ಮೈಕ್ ಶಾಲಾ ಹಳೆ ವಿದ್ಯಾರ್ಥಿ ಕೆ ಕಮಲಾಕ್ಷ ಕಾಮತ್ ವರಿಂದ ಶಾಲಾ ವಿದ್ಯಾರ್ಥಿಗಳಿಗೆ ಕೊಡೆಯನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅತಿಥಿಗಳಾದ ರೋ ಜಾನ್ ಡಿ.ಸಿಲ್ವಾ ಮಾತನಾಡಿ ಶಾಲೆಗಳಿಗೆ ನೀಡಿದ ದಾನ ದೇವರಿಗೆ ಸಲ್ಲುತ್ತದೆ. ಶಾಲೆಯ ಅಭಿವೃದ್ಧಿಯಲ್ಲಿ ರೋಟರಿ ಸಂಸ್ಥೆ ಸದಾ ಸಾಕಾರ ನೀಡುತ್ತದೆ ಎಂದು ಆಶ್ವಾಸನೆ ನೀಡಿದರು. ಮುಖ್ಯ ಅತಿಥಿಗಳಾದ ಜನಾರ್ಧನ್ ಇಡ್ಯಾ ಮಾತನಾಡಿ ಶಾಲೆಗಳ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು ಮಕ್ಕಳಲ್ಲಿ ಭಾಷಾ ಕೌಶಲ್ಯವನ್ನು ಬೆಳೆಸುವಲ್ಲಿ ಹೆಚ್ಚಿನ ಗಮನವನ್ನು ನೀಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷರಾದ ಕೆ .ಕೆ. ಕಾಮತ್ ಮಾತನಾಡಿ ಶಾಲೆಗೆ ಮಾಡಿದ ಸೇವೆ ದೇವರ ಸೇವೆ. ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಶಿಸ್ತು ಸಂಸ್ಕಾರ ಆಚಾರ ವಿಚಾರಗಳನ್ನು ಮೈಗೂಡಿಸಬೇಕು ಎಂದು ಶುಭ ಹಾರೈಸಿದರು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶೋಭಾ, ರೋಟರಿ ಕ್ಲಬ್ ಕಾರ್ಯದರ್ಶಿ ಮಧುಕರಿ ಹೆಗ್ಡೆ, ಬಾಲಾಜಿ ಜುವೆಲ್ಲರ್ಸ್ ಮಾಲಕರದ ಪ್ರಭಾಕರ್ ಪಾಟೀಲ್, ಶಿಕ್ಷಣ ಸಂಯೋಜಕರಾದ ಬಾಲಕೃಷ್ಣ ನಾಯಕ್, ಸಿ. ಆರ್. ಪಿ ಸಾಣೂರು ಕ್ಲಸ್ಟರ್ ಜ್ಯೋತಿ ನಾಯಕ್, ಸಿ ಆರ್ ಪಿ ಜಯಂತಿ ನಗರ ಕ್ಲಸ್ಟರ್ ಶ್ರೀಮತಿ ಪ್ರೇಮ ವೇದಿಕೆಯಲ್ಲಿ ಉಪಸ್ಥಿತರಿದ್ದರು .
ಸಹ ಶಿಕ್ಷಕಿ ಶಶಿಕಲಾ ಸ್ವಾಗತಿಸಿ ಮುಖ್ಯ ಶಿಕ್ಷಕಿ ಪ್ರತಿಮ ಎಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹ ಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಶಿಕ್ಷಕಿ ಗ್ರೇಸ್ ವಜ್ರಾವತಿ ಧನ್ಯವಾದವಿತ್ತರು. ಗೌರವ ಶಿಕ್ಷಕಿ ಮಧುಶ್ರೀ ಕಾರ್ಯಕ್ರಮ ನಿರೂಪಿಸಿದರು