ಉಡುಪಿ :ಉಡುಪಿ ಜಿಲ್ಲೆಯ ಕಾಪು ತಾಲೂಕು ಮಜೂರಿನಲ್ಲಿರುವ ಗೋವರ್ಧನ ಭಟ್ ಅವರ ಮನೆಯಲ್ಲಿಜೀವಂತ ಹಾವಿಗೆ ಜಲಾಭಿಷೇಕ ಮಾಡಿ ಪೂಜೆ ಸಲ್ಲಿಸಲಾಗಿದೆ.
ಮಜೂರಿನ ಗೋವರ್ಧನ ಭಟ್ ಅವರು ಸುಮಾರು 20 ವರ್ಷಗಳಿಂದ ನಾಗರ ಹಾವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಅಪಘಾತ ಸೇರಿದಂತೆ ಇತರ ಘಟನೆಯಿಂದ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವ ನಾಗರ ಹಾವುಗಳನ್ನು ಗೋವರ್ಧನ ಭಟ್ ರಕ್ಷಿಸುತ್ತಾರೆ. ಗಾಯಗೊಂಡ ಹಾವುಗಳನ್ನು ಮನೆಗೆ ತರುವ ಅವರು ನಾಗರ ಹಾವಿಗೆ ಸಂಪೂರ್ಣ ಚಿಕಿತ್ಸೆ ನೀಡಿ ಕಾಡಿಗೆ ಬಿಡುತ್ತಾರೆ. ಕಾಪು ಭಾಗದಲ್ಲಿ ಗೋವರ್ಧನ ಭಟ್ ಅವರು ನಾಗರ ಹಾವು ವೈದ್ಯರೆಂದೇ ಖ್ಯಾತರಾಗಿದ್ದಾರೆ.