ಮಾಸ್ಕೋ:ರಷ್ಯಾದ Luna25 ಮೂನ್ ಲ್ಯಾಂಡರ್ ಚಂದ್ರನ ಮೇಲ್ಮೈಯಲ್ಲಿ ಅಪ್ಪಳಿಸಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವ ರಷ್ಯಾ ಯತ್ನ ವಿಫಲವಾಗಿದೆ.
ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಈ ವಿಚಾರವನ್ನು ಖಚಿತಪಡಿಸಿದೆ. ನಿನ್ನೆಯಷ್ಟೇ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಷ್ಯಾದ ಚಂದ್ರಯಾನ ನೌಕೆ ಲೂನಾ-25 ಯೋಜನೆಯ ಡೀಬೂಸ್ಟಿಂಗ್ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿದೆ ಎಂದು ಹೇಳಿತ್ತು.
ಅಲ್ಲದೇ ಈ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಈಗ ಈ ನೌಕೆ ಚಂದ್ರನ ಅಂಗಣದಲ್ಲೇ ಕ್ರ್ಯಾಶ್ ಆಗುವ ಮೂಲಕ 47 ವರ್ಷಗಳ ಬಳಿಕ ರಷ್ಯಾ ಕೈಗೊಂಡ ಬೃಹತ್ ಕನಸೊಂದು ಭಗ್ನವಾದಂತಾಗಿದೆ.
ಆಗಸ್ಟ್ 11 ರಂದು ರಷ್ಯಾದ ಲೂನಾ 25 ಚಂದ್ರಯಾನ ನೌಕೆಯನ್ನು ರಷ್ಯಾ ಲಾಂಚ್ ಮಾಡಿತ್ತು. ಅಧಿಕೃತ ಹೇಳಿಕೆ ಖಚಿತಪಡಿಸುತ್ತದೆ. 2019 ರಲ್ಲಿ ISRO/ಚಂದ್ರಯಾನ-2 ಕ್ಕೆ ಇದ್ದಂತೆ ವಿಜ್ಞಾನ ಮತ್ತು ರೋಸ್ಕೋಸ್ಮಾಸ್ ತಂಡಕ್ಕೆ ದುಃಖದ ಈ ದಿನ. ಈಗ ಭಾರತದ ಚಂದ್ರಯಾನ 3 ವಿಕ್ರಮ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ..ಆಗಸ್ಟ್ 23 ಸಂಜೆ 5.45 ಕ್ಕೆ ಇಳಿಯಲು ನಿರ್ಧರಿಸಲಾಗಿದೆ..