ಬೆಂಗಳೂರು: ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇಂದಿರಾ ಕ್ಯಾಂಟೀನ್ ಗೆ ಆಹಾರ ಸರಬರಾಜುದಾರರಿಗೆ ಸರ್ಕಾರ ನೀಡುವ ದರ 5ರೂ ಹೆಚ್ಚಳವಾಗಿದೆ ಅಷ್ಟೆ.ಈ ಮೊದಲು ಆಹಾರ ಸರಬರಾಜುದಾರರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ತಲಾ 57 ರೂ ನೀಡಲಾಗುತ್ತಿತ್ತು. ಈಗ ಅದನ್ನು 62 ರೂಗೆ ಹೆಚ್ಚಿಸಲಾಗಿದೆ. ಆಹಾರ ಮೆನು ಬದಲಾವಣೆಯೊಂದಿಗೆ ಈ ಹೆಚ್ಚಳ ಮಾಡಲಾಗಿದೆಯೇ ಹೊರತು ಗ್ರಾಹಕರಿಗೆ ಹಳೆದ ದರದಲ್ಲೇ ಹೊಸ ಮೆನು ಮತ್ತು ಇನ್ನಷ್ಟು ಉತ್ತಮ ಆಹಾರ ದೊರಕಲಿದೆ.ಈ ಮೂಲಕ ರಾಜ್ಯದ ಜನತೆಗೆ ಬಿಗ್ ರಿಲೀಫ್ ನೀಡಿದೆ.
ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವಂತ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು, ಇಂದಿರಾ ಕ್ಯಾಂಟೀನ್ ಊಟದ ಬೆಲೆ 62 ರೂಪಾಯಿ ಪ್ರತಿ ದಿನದ ವೆಚ್ಚ ಹೊರತು ಒಂದು ಊಟದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಿಂದ ಸಂಗ್ರಹಿಸುವು 25 ರೂಪಾಯಿ. ಇದು ಬೆಳಗ್ಗೆ ಉಪಹಾರದ ರೂ.5, ಮಧ್ಯಾಹ್ನದ ಊಟ ರೂ.10 ಮತ್ತು ರಾತ್ರಿ ಊಟ ರೂ.10 ಸೇರಿ ರೂ.25 ಆಗಿದೆ. ಇದರಲ್ಲಿ ಯಾವುದೇ ದರ ಹೆಚ್ಚಳವಿಲ್ಲ. ರಾಜ್ಯ ಬಡವರ್ಗದ ಜನರು ಗಾಬರಿ ಪಡುವ ಅಗತ್ಯವಿಲ್ಲ ಎಂಬುದಾಗಿ ತಿಳಿಸಿದ್ದಾರೆ.