ಉಡುಪಿ :ಆ 26 ರಂದು, ಸೆ. 02 ರಂದು ಅನುಕ್ರಮವಾಗಿ,ಉಡುಪಿಯ ಕುಂಜಿಬೆಟ್ಟು ಟಿಎಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಯಲ್ಲಿ ಮಧ್ಯಾಹ್ನ 2 ಗಂಟೆ ಯಿಂದ ಭಾರತ್ ವಿಕಾಸ್ ಪರಿಷತ್ ಸಂಸ್ಥೆಯ “ಭಾರತ್ ಕೋ ಜಾನೋ” ಭಾರತವನ್ನು ತಿಳಿಯಿರಿ ಎಂಬ ರಸಪ್ರಶ್ನೆ ಕಾರ್ಯಕ್ರಮ ನಡೆಯಲಿದೆ ಎಂದು ಭಾರತ್ ವಿಕಾಸ್ ಪರಿಷದ್, ಭಾರ್ಗವ ಶಾಖೆ,ಕಲ್ಸಂಕ ಉಡುಪಿ ಇದರ ಸಂಚಾಲಕ ಪ.ವಸಂತ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಬಾಲಕ,ಬಾಲಕಿ ತನ್ನ ದೇಶದ ಬಗ್ಗೆ ತಿಳಿದಿರಲಿ, ಹೆಮ್ಮೆಪಟ್ಟು ಸತ್ಪ್ರಜೆಯಾಗಿ ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇಂತಹುದೇ ಇನ್ನೊಂದು ಕಾರ್ಯಕ್ರಮ “ರಾಷ್ಟ್ರೀಯ ಸಮೂಹ ಗಾಯನ ಸ್ಪರ್ಧೆ”. ಈ ಸ್ಪರ್ಧೆಯು ಮಕ್ಕಳಲ್ಲಿ, ಜನ ಸಮುದಾಯದಲ್ಲಿ,ದೇಶಭಕ್ತಿ ಕಿಚ್ಚನ್ನು ಹೆಚ್ಚಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ಈ ಕಾರ್ಯಕ್ರಮಗಳಲ್ಲಿ ಉಡುಪಿ ಸುತ್ತಮುತ್ತಲಿನ ಶಾಲೆಯ ಬಾಲಕ ಬಾಲಕಿಯರು ಪಾಲ್ಗೊಳ್ಳಲಿದ್ದಾರೆ.
ಭಾರತ್ ವಿಕಾಸ್ ಪರಿಷತ್ ಒಂದು ಸೇವಾ ಸಂಸ್ಥೆಯಾಗಿದ್ದು ಇದರ ಶಾಖೆಗಳು ದೇಶದ ಉದ್ದಗಲಗಳಲ್ಲಿ ಹಾಗೂ ವಿದೇಶಗಳಲ್ಲೂ ವ್ಯಾಪಿಸಿದೆ.ಭಾರತ್ ವಿಕಾಸ್ ಪರಿಷತ್ ದೇಶದ ಸರ್ವಾಂಗೀಣ ಪ್ರಗತಿಯಲ್ಲಿ ತನ್ನನ್ನು ತಾನು ಸಮರ್ಪಿಸಿಕೊಂಡಿದೆ.