ಉಡುಪಿ: ಗ್ರಾಹಕರಿಗೆ ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಬಿಸಿ ಮುಟ್ಟಿಸಿದ್ದ ಟೊಮೆಟೊ ದರ ಕೊನೆಗೂ ಇಳಿಕೆಯಾಗಿದೆ. ಶುಕ್ರವಾರ ಮಾರುಕಟ್ಟೆಯಲ್ಲಿ ಕೆ.ಜಿ ಟೊಮೆಟೊಗೆ ₹50 ರಿಂದ ₹55ಕ್ಕೆ ಮಾರಾಟವಾಯಿತು. ನಿರಂತರವಾಗಿ ದರ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಕಳೆದವಾರ ಕೆ.ಜಿಗೆ ₹80 ರಿಂದ ₹100ರವರೆಗೆ ಮಾರಾಟವಾಗುತ್ತಿದ್ದ ಟೊಮೆಟೊ ದರ ದಿಢೀರ್ ಕುಸಿತ ಕಂಡಿದೆ. ಒಂದು ವಾರದಲ್ಲಿ ಬೆಲೆ ಅರ್ಧದಷ್ಟು ಇಳಿಕೆಯಾಗಿದೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಜಿಲ್ಲೆಯ ಮಾರುಕಟ್ಟೆಗೆ ಹೆಚ್ಚು ಟೊಮೆಟೊ ಪೂರೈಕೆಯಾಗುತ್ತಿರುವುದರಿಂದ ಬೆಲೆ ಇಳಿಕೆಯಾಗಿದೆ ಎನ್ನಲಾಗಿದೆ