ಮಲ್ಪೆ: ಮೀನುಗಾರಿಕೆ ನಡೆಸುವ ವೇಳೆ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಮೀನುಗಾರ ಗೋಪಾಲ ಶನಿಯಾರ್ ನಾಯ್ಕ (35) ಅವರು ನಾಪತ್ತೆಯಾಗಿದ್ದಾರೆ. ಆ. 11ರಂದು ಅವರು ಇತರ ಮೀನುಗಾರರ ಜತೆ ಮಲ್ಪೆ ಬಂದರಿನಿಂದ ಬೋಟಿನಲ್ಲಿ ತೆರಳಿದ್ದು, ಆ. 13ರಂದು ಮಧ್ಯಾಹ್ನದ ವೇಳೆ ಮೀನುಗಾರಿಕೆ ನಡೆಸುತ್ತಿರುವಾಗ ಆಕಸ್ಮಿಕವಾಗಿ ಬೋಟಿನಿಂದ ಕಾಲು ಜಾರಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದಾರೆ.
ತತ್‌ಕ್ಷಣ ಬೋಟಿನಲ್ಲಿದ್ದವರು ಹುಡುಕಾಟ ನಡೆಸಿದರೂ ಅವರು ಪತ್ತೆಯಾಗಲಿಲ್ಲ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.