ನಿಟ್ಟೆ:ನಿಟ್ಟೆ ಗ್ರಾಮ ಪಂಚಾಯತ್‌ನ ನೂತನ ಅಧ್ಯಕ್ಷರಾಗಿ ಶೋಭಾ, ಉಪಾಧ್ಯಕ್ಷರಾಗಿ ನಿತಿನ್ ಸಾಲ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆ. 16 ರಂದು ಆಯ್ಕೆ ಪ್ರಕ್ರಿಯೆ ನಡೆದಿತ್ತು. ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಸೋಮಶೇಖರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ತಾಲೂಕಿನ ಎರಡನೇ ಅತಿ ದೊಡ್ಡ ಪಂಚಾಯತ್ ಆಗಿರುವ ನಿಟ್ಟೆಯಲ್ಲಿ 31 ಮಂದಿ ಸದಸ್ಯರಿದ್ದಾರೆ. ಎಲ್ಲರೂ ಬಿಜೆಪಿ ಬೆಂಬಲಿತರು. ಮೀಸಲಾತಿ ನಿಗದಿಯಲ್ಲಿ ಅಧ್ಯಕ್ಷ ಅನುಸೂಚಿತ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಕೆಟಗರಿಗೆ ಒಲಿದಿತ್ತು.