ಹೆಬ್ರಿ : ಅಧಿಕ ಶ್ರಾವಣ ಮಾಸದ ಅಂಗವಾಗಿ ಶ್ರೀ ಕದಲೀಪ್ರಿಯ ಅನಂತಪದ್ಮನಾಭ ದೇವರ ಸನ್ನಿಧಿಯಲ್ಲಿ ನಡೆಯುತ್ತಿದ್ದ ಪುರುಷೋತ್ತಮ ಮಾಸಾಚರಣೆಯ ಲಕ್ಷಾಧಿಕ ಪ್ರದಕ್ಷಿಣ ನಮಸ್ಕಾರದ ಉದ್ಯಾಪನಾ ಹೋಮ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆಯು ಅಧಿಕ ಮಾಸಾದ ಕೊನೆಯ ದಿನವಾದ ಬುಧವಾರದಂದು ಜರಗಿತು.
ಈ ಸಂದರ್ಭದಲ್ಲಿ ಸರ್ತಿ ಅರ್ಚಕರಾದ ಶ್ರೀ ನಾರಾಯಣ ಆಚಾರ್ಯ, ಶ್ರೀ ರಾಮಕೃಷ್ಣ ಆಚಾರ್ಯ, ಅರ್ಚಕರಾದ ಶ್ರೀ ಮೋಹನ್ ರಾಜ್ ಜೋಯಿಸ್, ಶ್ರೀ ಪದ್ಮನಾಭ ಆಚಾರ್ಯ, ಶ್ರೀ ಗುರುಮೂರ್ತಿ ಜೋಯಿಸ್ ಕ್ಷೇತ್ರೇಷರರಾದ ಶ್ರೀ ತಾರನಾಥ ಬಲ್ಲಾಳ್ ಮೊದಲಾದ ಸಾವಿರಾರು ಮಂದಿ ಉಪಸ್ಥಿತರಿದ್ದರು.