ಉಡುಪಿ : ನಗರದ ವಿವಿಧ ಕಾಲೇಜು ಮತ್ತು ಹಾಸ್ಟೆಲ್ಗಳಲ್ಲಿ ಇಂದು ಕು. ಸೌಜನ್ಯ ಪ್ರಕರಣವನ್ನು ರಾಜ್ಯ ಸರ್ಕಾರ ಈ ಕೂಡಲೇ ಮರು ತನಿಖೆಗೆ ಆದೇಶಿಸಬೇಕು ತನ್ಮೂಲಕ ನೈಜ ಅಪರಾಧಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಪೋಸ್ಟ್ ಕಾರ್ಡ್ ಚಳುವಳಿಯನ್ನು ನಡೆಸಲಾಯಿತು.
ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳ ಮೂಲಕ ಪೋಸ್ಟ್ ಕಾರ್ಡ್ ನ ಮೂಲಕ ರಾಜ್ಯದ ಮುಖ್ಯಸ್ಥರಾದ ರಾಜ್ಯಪಾಲರಿಗೆ, ಪ್ರಕರಣವನ್ನು ಮರು ತನಿಖೆಗೆ ಆದೇಶಿಸುವಂತೆ ಆಗ್ರಹಿಸಿ ಮನವಿಯನ್ನು ಮಾಡಲಾಯಿತು.
ಇದರಲ್ಲಿ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಮುಖ ಭಟ್ ಜಿಲ್ಲಾ ಸಂಚಾಲಕರಾದ ಗಣೇಶ್ ಪೂಜಾರಿ, ನಗರ ಕಾರ್ಯದರ್ಶಿ ಶ್ರೀವತ್ಸ ಸಹ-ಕಾರ್ಯದರ್ಶಿ ಕಾರ್ತಿಕ್ ಮತ್ತು ಭಾವನ ವಿದ್ಯಾರ್ಥಿನಿ ಪ್ರಮುಖ್ ಸಂಹಿತಾ ಶಾಸ್ತ್ರಿ ಹಾಗೂ ಕಾರ್ಯಕರ್ತರಾದ ರವಿಚಂದ್ರ, ಪ್ರಸನ್ನ, ಪ್ರದೀಪ್, ರಕ್ಷಿತ್, ಪ್ರಶ್ಮಾ , ಮನು ಶೆಟ್ಟಿ ಭಾಗವಹಿಸಿದರು.