ಕಟೀಲು :ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ರಥಬೀದಿಯಲ್ಲಿ ಭಕ್ತರು, ಕ್ಷೇತ್ರದ ಸಮೂಹ ಶಿಕ್ಷಣ ಸಂಸ್ಥೆಗಳ ಎರಡೂವರೆ ಸಾವಿರ ವಿದ್ಯಾರ್ಥಿಗಳೊಂದಿಗೆ ದೇಗುಲದ ಆನೆ ಮಹಾಲಕ್ಷ್ಮೀ ಕೂಡ ರಾಷ್ಟ್ರಧ್ವಜವನ್ನು ಸೊಂಡಿಲಿನಲ್ಲಿ ಎತ್ತಿಹಿಡಿದು ಧ್ವಜವಂದನೆ ಸಲ್ಲಿಸಿತು.
ನಿವೃತ್ತ ಸೈನಿಕ ಕಟೀಲು ಲಕ್ಷ್ಮೀನಾರಾಯಣ ರಾವ್ ಧ್ವಜಾರೋಹಣಗೈದರು.
ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಹಾಡುತ್ತಿದ್ದಂತೆ ಸಹಸ್ರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜಗಳನ್ನು ಎತ್ತಿಹಿಡಿದರು. ಆಗ ಆನೆಯೂ ಬಾವುಟವನ್ನು ಸೊಂಡಿಲಿನಲ್ಲಿ ಎತ್ತಿಹಿಡಿದು ಬೀಸುತ್ತ ಸಂಭ್ರಮಿಸಿತು