ಬೈಲೂರು: ಮಧ್ಯಪಾನ ಮಾಡಿ ವಾಹನ ಚಲಾಯಿಸಿಕೊಂಡು ಬಂದು ಬೈಲೂರು ಮುಖ್ಯರಸ್ತೆಯಲ್ಲಿರುವ ತರಕಾರಿ ಅಂಗಡಿಗೆ ಕಾರನ್ನು ನುಗ್ಗಿಸಿದ ಘಟನೆ ಇಂದು ಸಂಜೆ ನಡೆದಿದೆ
ಬೆಂಗಳೂರಿನಿಂದ ಮಲ್ಪೆಗೆ ಹೋಗುತ್ತಿದ್ದ ಕಾರು ಬೈಲೂರು ಪೇಟೆಯಲ್ಲಿ ಈ ಅವಘಡ ಸಂಭವಿಸಿದೆ
ಬೆಂಗಳೂರಿನಿಂದ 4 ಮಂದಿ ಯುವಕರು KA 04 MX 0744 ವಾಹನ ಸಂಖ್ಯೆಯ ಕಾರಿನಲ್ಲಿ ಮಲ್ಪೆಗೆ ಕಾರ್ಕಳದ ಮೂಲಕ ಹೋಗುತ್ತಿದ್ದಾಗ ಬೈಲೂರಿನಲ್ಲಿ ಈ ದುರ್ಘಟನೆ ನಡೆದಿದ್ದು ಯಾವುದೇ ಪ್ರಣಪಾಯ ಸಂಬವಿಸಿಲ್ಲ.
ಗಾಡಿಯಲ್ಲಿ ಮಧ್ಯದ ಬಾಟಲಿಗಳಿದ್ದು ಎಲ್ಲರೂ ಮಧ್ಯಪಾನ ಮಾಡಿರಬಹುದು ಮಧ್ಯಪಾನ ಮಾಡಿ ಈ ಅವಘಡ ಸಂಭವಿಸಿದೆ.
ತಪ್ಪಿಸಿಕೊಳ್ಳಲು ಯತ್ನ ರಸ್ತೆ ನೇರವಾಗಿ ಅಗಲವಾಗಿದ್ದರು ಚಾಲಕನ ಅತಿ ವೇಗ ಹಾಗೂ ಬೇಜವಾಬ್ದಾರಿ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ . ವಾಹನ ಡಿಕ್ಕಿ ರಭಸಕ್ಕೆ ಅಂಗಡಿಯ ಗೋಡೆ ಬಿದ್ದಿದೆ.
ತಪ್ಪಿಸಿಕೊಳ್ಳಲು ಯತ್ನ: ಗಾಡಿಯನ್ನು ಡಿಕ್ಕಿ ಹೊಡೆಸಿ ತಪ್ಪಿಸಿಕೊಲ್ಲುವ ಯತ್ನ ನಡೆದಿತ್ತು. ಅದಕ್ಕಾಗಿ ಗಾಡಿಯನ್ನು ಹಿಮ್ಮುಖ ಚಾಲನೆ ಮಾಡಿ ಗಾಡಿಯನ್ನು ಮುಂದೆ ಚಲಿಸುವ ಸಂದರ್ಭ ಗಾಡಿ ಟೈಯರ್ ಪಂಕ್ಚರ್ ಆಗಿದ್ದರಿಂದ ಗಾಡಿ ಅಲ್ಲೇ ನಿಂತುಕೊಂಡಿತು. ಇದರಿಂದ ಅವರ ತಪ್ಪಿಸಿಕೊಳ್ಳುವ ಯತ್ನ ವಿಫಲವಾಯಿತು
ತರಕಾರಿ ಅಂಗಡಿಯಲ್ಲಿ ಹೆಚ್ಚಿನ ಸಮಯದಲ್ಲಿ ಜನ ಇಲ್ಲಿ ವ್ಯಾಪಾರ ಮಾಡುತ್ತಿರುತ್ತಾರೆ ಆದರೆ ಈ ಹೊತ್ತಿನಲ್ಲಿ ಯಾರು ಕೂಡ ಅಲ್ಲೇ ವ್ಯಾಪಾರ ಮಾಡದೆ ಇದ್ದುದ್ದರಿಂದ ಆಗುತ್ತಿದ್ದ ದೊಡ್ಡ ಅಪಾಯ ತಪ್ಪಿದಂತಾಗಿದೆ.