ಕಾರ್ಕಳ ಹಿಂದು ಜಾಗರಣ ವೇದಿಕೆ ಕಾರ್ಕಳದ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬೃಹತ್ ಪಂಜಿನ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನ ಗಾಂಧಿ ಮೈದಾನದಲ್ಲಿ ಅಗಸ್ಟ್ 14ರ ಸಂಜೆ ನಡೆಯಿತು.
ಕಾರ್ಕಳ ಅನಂತಶಯನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಂಜನ್ನು ದೇವಳದ ಅರ್ಚಕರು ಬಾಲಾಜಿ ಅಯ್ಯಪ್ಪ ಶಿಬಿರದ ಪೂಜ್ಯ ಗುರುಸ್ವಾಮಿ ಶ್ರೀ ಬಾಲಕೃಷ್ಣ ಹೆಗ್ಡೆ, ಶ್ರೀ ಬೋಳ ಶ್ರೀನಿವಾಸ ಕಾಮತ್, ಶ್ರೀ ಗಿರಿಧರ್ ನಾಯಕ್ ಇವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಕಾರ್ಕಳ ಅನಂತಶಯನ ವೃತ್ತದಿಂದ ಹೊರಟ ಬೃಹತ್ ಪಂಜಿನ ಮೆರವಣಿಗೆ ರಥಬೀದಿಯಲ್ಲಿ ಸಾಗಿ ಕಾರ್ಕಳ ಗಾಂಧಿ ಮೈದಾನದ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದಲ್ಲಿ ಸಮಾಪನಗೊಂಡಿತು.
ಅಭೂತಪೂರ್ವವಾಗಿ ಸಾಗಿದ ಪಂಜಿನ ಮೆರವಣಿಗೆಯಲ್ಲಿ ಕಾರ್ಕಳದ ಸುಮಾರು 800ಕ್ಕೂ ಮಿಕ್ಕಿ ದೇಶಭಕ್ತ ಹಿಂದೂ ಬಂಧು ಬಗಿನಿಯರು ಭಾಗಿಯಾದರು.
ಆ ನಂತರ ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಸಾರ್ವಜನಿಕ ಸಭೆ ನಡೆಯಿತು.
ಶ್ರೀಮತಿ ಪ್ರಮೀಳಾ ದಾನಸಾಲೆ ಇವರ ವಂದೇ ಮಾತರಂ ಗೀತೆಯೊಂದಿಗೆ ಶುಭ ಆರಂಭಗೊಂಡ ಸಭಾ ಕಾರ್ಯಕ್ರಮಕ್ಕೆ ಕಾರ್ಕಳದ ಖ್ಯಾತ ಉದ್ಯಮಿ, ಅಖಂಡ ರಾಷ್ಟ್ರದ ಕನಸುಗಾರ ಶ್ರಿ ನಿತ್ಯಾನಂದ ಪೈ ಇವರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಆ ನಂತರ
ಭಾರತ ಮಾತೆಯ ವರ್ಣಚಿತ್ರಕ್ಕೆ ವೇದಿಕೆಯಲ್ಲಿದ್ದ ಗಣ್ಯರು ಪುಷ್ಪ ವೃಷ್ಟಿ ಮಾಡಿದರು.
ಹಿಂದು ಜಾಗರಣ ವೇದಿಕೆಯ ಪ್ರಾಂತ ಸಹಸಂಚಾಲಕರಾಗಿರುವ ಶ್ರೀ ಮಹೇಶ್ ಕಡಗದಾಳು ಇವರು ದಿಕ್ಸೂಚಿ ಭಾಷಣ ಮಾಡಿದರು.
ಸಭಾ ಅಧ್ಯಕ್ಷತೆಯನ್ನು ಕೊಡುಗೈ ದಾನಿ, ಖ್ಯಾತ ಧಾರ್ಮಿಕ ಮುಂದಾಳು,ಪ್ರಖರ ರಾಷ್ಟ್ರವಾದಿ, ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ (ರಿ)ಇದರ ರಾಜ್ಯ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ ಬಜಗೋಳಿ ಇವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ, ಅಪ್ರತಿಮ ದೇಶಭಕ್ತ ಹಿಂದೂ ಸಂಘಟನೆಗಳ ಬೆನ್ನೆಲುಬಾಗಿರುವ ಶ್ರೀ ಅರುಣ್ ನಿಟ್ಟೆ ಇವರು ಆಗಮಿಸಿದ್ದರು.
ಹಿಂಜಾವೇ ಜಿಲ್ಲಾ ಸಮಿತಿ ಸದಸ್ಯರಾಗಿರುವ ಶ್ರೀ ರಮೇಶ್ ಕಲ್ಲೊಟ್ಟೆ ಇವರು ಸ್ವಾಗತ ಭಾಷಣ ಮಾಡಿದರು.
ಪ್ರತಿಜ್ಞಾ ವಿಧಿಯನ್ನು ಶ್ರೀ ಸಂತೋಷ್ ಕುಲಾಲ್ ಗುಂಡ್ಯಡ್ಕ ಇವರು ನೆರವೇರಿಸಿದರು.
ಖ್ಯಾತ ನ್ಯಾಯವಾದಿಗಳಾದ ಶ್ರೀ ಮಣಿರಾಜ್ ಶೆಟ್ಟಿ, ಶ್ರೀ ರವೀಂದ್ರ ಮೊಯ್ಲಿ, ನಿಟ್ಟೆ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಭಾಷ್ ಚಂದ್ರ ಹೆಗ್ಡೆ,ಪುರಸಭಾ ಸದಸ್ಯರುಗಳಾದ ಶ್ರೀಮತಿ ಭಾರತಿ ಅಮೀನ್, ನೀತಾ ಆಚಾರ್ಯ, ಹಿಂಜಾವೇ ಜಿಲ್ಲಾ ಪ್ರಮುಖರಾದ ಶ್ರೀ ಪ್ರಶಾಂತ್ ನಾಯಕ್, ಶ್ರೀ ಚಂದ್ರಶೇಖರ ಶೆಟ್ಟಿ (ದಾಮಣ್ಣ) ಸಂತೋಷ್ ಕುಕ್ಕುದಕಟ್ಟೆ, ಹಿಂದೂ ಮುಖಂಡರಾದ ಶ್ರೀ ಸಂತೋಷ್ ರಾವ್ ಕಾಳಿಕಾಂಬ, ಶ್ರೀ ಅವಿನಾಶ್ ಶೆಟ್ಟಿ, ಯುವರಾಜ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆದ ಈ ಒಂದು ಯಶಸ್ವೀ ಕಾರ್ಯಕ್ರಮ
ಹಿಂದು ಜಾಗರಣ ವೇದಿಕೆಯ ತಾಲೂಕು ಸಂಚಾಲಕರಾದ ಶ್ರೀ ಗುರುಪ್ರಸಾದ್ ನಾರಾವಿ ಇವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಸತೀಶ್ ಹೊಸ್ಮಾರು ಇವರು ನೆರವೇರಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಕಾರ್ಕಳ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಶ್ರಮಿಸಿದರು.