ಗೃಹ ರಕ್ಷಕ ದಳ ಹಾಗೂ ಪೌರರಕ್ಷಣ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 17 ಮಂದಿ ಅಧಿಕಾರಿ-ಸಿಬ್ಬಂದಿ 2022ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಲಭಿಸಿದೆ.
ಗೃಹ ರಕ್ಷಕ ದಳದ ಬೆಂಗಳೂರು ಉತ್ತರದ ಸೀನಿಯರ್ ಕಮಾಂಡರ್ ಜಿ.ರುಪಾ, ಸೆಕ್ಷನ್ ಲೀಡರ್ ಕೆ.ವಿ.ಮಮತಾ, ಬೆಂಗಳೂರು ಗ್ರಾಮಾಂತರ ಸೀನಿಯರ್ ಪ್ಲಟೂನ್ ಕಮಾಂಡರ್ ಎನ್.ವೆಂಕಟೇಶ್, ಬೆಳಗಾವಿ ಸಮಾದೇಷ್ಟರಾದ ಡಾ| ಕಿರಣ್ ರುದ್ರಾ ನಾಯಕ್, ಬಳ್ಳಾರಿಯ ಪ್ಲಟೂನ್ ಕಮಾಂಡರ್ ಬಿ.ನಾಗರಾಜ, ಪ್ಲಟೂನ್ ಸಾರ್ಜೆಂಟ್ ಕೆ.ಶಂಕರ್ ನಾಯ್ಕ, ಸೆಕ್ಷನ್ ಲೀಡರ್ ಕೆ.ಬೆಟ್ಟದೇಶ, ಚಿತ್ರದುರ್ಗದ ಸಮಾದೇಷ್ಟರಾದ ಸಿ.ಕೆ.ಸಂಧ್ಯಾ, ಧಾರವಾಡ ಜಿಲ್ಲಾ ಕ್ವಾರ್ಟರ್ ಮಾಸ್ಟರ್ ಡಾ| ಪ್ರಕಾಶ್ ಪಿ.ಪಾವಡ ಶೆಟ್ಟಿ, ಅಸಿಸ್ಟೆಂಟ್ ಸೆಕ್ಷನ್ ಲೀಡರ್ ಗಣೇಶ ಬಸಪ್ಪ ಬಾಲೇಸೂರ, ಹಾಸನ ಪ್ಲಟೂನ್ ಕಮಾಂಡರ್ ಬಿ.ಜಿ.ಮಂಜುಳಾ, ಕಲಬುರಗಿ ಸಮಾದೇಷ್ಟರಾದ ಸಂತೋಷ ಕುಮಾರ್, ಮಂಡ್ಯ ಕಂಪೆನಿ ಕ್ವಾರ್ಟರ್ ಮಾಸ್ಟರ್ ಸಾರ್ಜೆಂಟ್ ಕೆ.ಆರ್.ಪಾಂಡು, ತೀರ್ಥಹಳ್ಳಿ ಯುನಿಟ್ ಆಫೀಸರ್ ಎಚ್.ಪಿ.ರಾಘವೇಂದ್ರ ಅವರಿಗೆ ಸಿಎಂ ಪದಕ ಲಭಿಸಿದೆ
ಬೆಂಗಳೂರು ನಗರದ ಡಿ.ಜಿ.ಹಳ್ಳಿಯ ಡಿವಿಷನಲ್ ವಾರ್ಡನ್ ನಜೀಬ್ ಅಹಮದ್, ಮಹದೇವಪುರದ ಡಿವಿಷನ್ ವಾರ್ಡನ್ ಡಾ ಕೆ. ಸುನೀತಾ ಸಜಿನ್, ಕಮ್ಮನ ಹಳ್ಳಿ ಮತ್ತು ಬಾಣಸವಾಡಿಯ ಪೋಸ್ಟ್ ವಾರ್ಡನ್ ಜೋಸೆಫ್ ಬಲರಾಜ್ ಅವರಿಗೆ ಸಿಎಂ ಪದಕ ಲಭಿಸಿದೆ