ಕಾರ್ಕಳ :ಶಕ್ತಿ ಸಮೃದ್ಧಿ ಸಂಜೀವಿನಿ ಒಕ್ಕೂಟ (ರಿ.) ಸಾಣೂರು ಮತ್ತು ಗ್ರಾಮ ಪಂಚಾಯತ್ ಸಾಣೂರು ಇದರ ಸಹಯೋಗದಲ್ಲಿ ಆಟಿ ಡೊಂಜಿ ದಿನ ಕಾರ್ಯಕ್ರಮ ಸುವರ್ಣ ಗ್ರಾಮೋದಯ ಸೌದದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಶೆಟ್ಟಿಗಾರ್ ರವರ ಅಧ್ಯಕ್ಷತೆಯಲ್ಲಿ ಈ ನಡೆಸಲಾಯಿತು.
ಅವರು ಈ ಆಟಿ ದಿನದ ವಿಶೇಷತೆಯ ಬಗ್ಗೆ, ತಿಂಡಿ ತಿನಸುಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುರೇಖಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಪೂಜಾರಿ , ಸಾಣೂರು ಬೀಟ್ ಪೊಲೀಸ್ ಸಂತೋಷ್, ಸೆರೆಕೇರೆಯ ಮ್ಯಾನೇಜರ್ ಸ್ವಾತಿ ಪ್ರಭು,ಆರೋಗ್ಯಮಾಹಿತಿ ನೀಡಿದರು ಸಾಣೂರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಉಷಾ, ಪಂಚಾಯತ್ ಸದಸ್ಯರಾದ ಪ್ರಕಾಶ್ ರಾವ್,ಸುಮತಿ, ಪ್ರಮೀಳಾ, ಸರಸ್ವತಿ, ಯಶೋಧ, , ಅಂಗನವಾಡಿ ಕಾರ್ಯಕರ್ತೆಯರಾದ ಸಾಕಮ್ಮ, ಆಶಾ ಕಾರ್ಯಕರ್ತೆಯರಾದ ವಿಶಾಲಾಕ್ಷಿ, ಪಂಚಾಯತ್ ಕಾರ್ಯದರ್ಶಿ ಸವಿತಾ ಪ್ರಭು, ಒಕ್ಕೂಟದ ಕಾರ್ಯದರ್ಶಿ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು,
ಈ ಸಂದರ್ಭದಲ್ಲಿ SLRM ನ ಮೇಲ್ವಿಚಾರಕರಾದ ಅನ್ನಪೂರ್ಣ ಮತ್ತು ವಾಹನ ಚಾಲಕರಾದ ಉಮೇಶ್ ಸುವರ್ಣ ಇವರನ್ನು ಅಭಿನಂದಿಸಲಾಯಿತು.
ಈ ಕಾರ್ಯಕ್ರಮದಲ್ಲಿ 43 ಬಗೆಯ ತಿನಿಸುಗಳನ್ನು ಪ್ರದರ್ಶನ ಮಾಡಿ ಸವಿಯಲಾಯಿತು MBK ಕರಿಬಸವೇಶ್ವರಿ ಯವರು ಕಾರ್ಯಕ್ರಮ ನಿರೂಪಿಸಿದರು, LCRP ಜಯಶ್ರೀ ದೇವಾಡಿಗರವರು ಸ್ವಾಗತಿಸಿದರು, LCRP ಶ್ವೇತಾ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು, ವಾರ್ಡ್ ಪದಾಧಿಕಾರಿಗಳು, ಪಶು ಸಖಿ, ಕೃಷಿ ಸಖಿ, ಪಂಚಾಯತ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಮತ್ತು ಸ್ತ್ರೀ ಶಕ್ತಿ ಸಂಘದ ಸದಸ್ಯರು, ಗ್ರಂಥಾಲಯ ಮೇಲ್ವಿಚಾರಕರಾದ ಜ್ಯೋತಿ, VRW ನ ಸಂತೋಷ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಮಾಡಿ ಬಹುಮಾನ ವಿತರಣೆ ಮಾಡಲಾಯಿತು…