ಟಾಟಾ ಸಮೂಹ ಭಾರತೀಯ ವಾಯುಯಾನದ ದೈತ್ಯ ಸಂಸ್ಥೆ ಏರ್ ಇಂಡಿಯಾವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡ ಬಳಿಕ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಇದೀಗ ಏರ್ ಇಂಡಿಯಾದ ಹೊಸ ಲೋಗೋವನ್ನು ಗುರುವಾರದಂದು ಅನಾವರಣಗೊಳಿಸಲಾಗಿದ್ದು, ‘ಮಹಾರಾಜ’ ಲಾಂಛನಕ್ಕೆ ಆಧುನಿಕ ರೂಪ ನೀಡಲಾಗಿದೆ. ಅಲ್ಲದೆ ಕೆಂಪು, ಬಿಳಿ ಮತ್ತು ನೇರಳೆ ಬಣ್ಣಗಳ ಸಂಯೋಜನೆಯನ್ನು ಹೊಂದಿದೆ.
Revealing the bold new look of Air India.
Our new livery and design features a palette of deep red, aubergine, gold highlights and a chakra-inspired pattern.
Travellers will begin to see the new logo and design starting December 2023.#FlyAI #NewAirIndia
*Aircraft shown are… pic.twitter.com/KHXbpp0sSJ
— Air India (@airindia) August 10, 2023
ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರ ಪ್ರಕಾರ, ಹೊಸ ಲಾಂಛನವು ಅವರ ದಿಟ್ಟ ದೃಷ್ಟಿಕೋನ ಮತ್ತು ಅಪರಿಮಿತ ಸಾಧ್ಯತೆಗಳು, ಪ್ರಗತಿಪರತೆ ಮತ್ತು ವಿಶ್ವಾಸವನ್ನು ಪ್ರತಿನಿಧಿಸುತ್ತದೆ.
“ನೀವು ಇಂದು ಇಲ್ಲಿ ನೋಡುತ್ತಿರುವ ಹೊಸ ಲೋಗೋ. ಈ ದೃಷ್ಟಿಕೋನವು ಐತಿಹಾಸಿಕವಾಗಿ ಬಳಸಲಾಗುವ ಕಿಟಕಿಯಿಂದ ಸೂಚಿಸಲ್ಪಡುತ್ತದೆ (ಸುವರ್ಣ ಕಿಟಕಿಯ ಶಿಖರವು ಅಪರಿಮಿತ ಸಾಧ್ಯತೆಗಳು, ಪ್ರಗತಿ, ವಿಶ್ವಾಸ ಮತ್ತು ಎಲ್ಲವನ್ನೂ ಸೂಚಿಸುತ್ತದೆ” ಎಂದು ಚಂದ್ರಶೇಖರನ್ ಹೇಳಿದರು.