ಉಡುಪಿ : ಗೃಹಜ್ಯೋತಿ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ ನೀಡಿದರು.
ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮೂರು ತಿಂಗಳಲ್ಲಿ ಮೂರನೇ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತಿದೆ ಎಂದರು.
ಎಲ್ಲಾ ಭಾಷೆ, ಜಾತಿ ಧರ್ಮದವರಿಗೆ ಈ ಯೋಜನೆ ದಕ್ಕಬೇಕು. ಅಂಬೇಡ್ಕರ್, ಗಾಂಧಿ, ಶಿವಾಜಿ, ಅಕ್ಕಮಹಾದೇವಿ ಅವರಂಥ ಮಹಾಪುರುಷರ ಹಾದಿಯಲ್ಲಿ ಸಾಗಬೇಕು ಎಂದರು.ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸುತ್ತ ಬಂದಿದೆ. ಈಗಾಗಲೇ ಶಕ್ತಿ, ಅನ್ನಭಾಗ್ಯ ಜಾರಿಯಾಗಿದೆ ಎಂದು ಹೇಳಿದರು.
ಈಗ ಗೃಹ ಜ್ಯೋತಿ ಆರಂಭವಾಗಿದೆ. ಆಗಸ್ಟ್ 18 ಅಥವಾ 20 ರಂದು ಗೃಹ ಲಕ್ಷ್ಮೀ ಜಾರಿಯಾಗಲಿದೆ. ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದ ಜನರಿಗೆ ಭರವಸೆ ತುಂಬುವುದಕ್ಕಾಗಿ ಕಾಂಗ್ರೆಸ್ ಗ್ಯಾರಂಟಿಗಳನ್ನು ಘೋಷಣೆ ಮಾಡಿತು.
ಉಡುಪಿ ಜಿಲ್ಲೆಯಲ್ಲಿ 3,15, 692 ಗ್ರಾಹಕರಿದ್ದು, ಈ ಪೈಕಿ 2,69,949 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ
ಎಷ್ಟೇ ಕಷ್ಟವಾದರೂ, ವಿರೋಧಿಗಳು ಏನೇ ಹೇಳಿದರೂ ನಾವು ಕೊಟ್ಟ ಮಾತನ್ನು ಈಡೇರಿಸುತ್ತೇವೆ, ನುಡಿದಂತೆ ನಡೆದೇ ನಡೆಯುತ್ತೇವೆ.ಎಂದು ಹೇಳಿದರು.