ಕಾರ್ಕಳ :ಎಸ್.ವಿ.ಟಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಪಡಿ ಮಂಗಳೂರು, ಪುರಸಭೆ ಕಾರ್ಕಳ,ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ರಿ. ಉಡುಪಿ ಜಿಲ್ಲೆ , ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ರಿ. ಕಾರ್ಕಳ ,ಜೇಸಿಐ ಕಾರ್ಕಳ ರೂರಲ್ ಇವರ ಸಹಭಾಗಿತ್ವದಲ್ಲಿ ಶಿಕ್ಷಣ ಹಕ್ಕು ಮತ್ತು ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಧ್ವನಿಗೆ ಧ್ವನಿಯಾಗೋಣ ಅಭಿಯಾನ -2023 ರ ಪರಿಕಲ್ಪನೆಯಲ್ಲಿ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಮಾಹಿತಿ ನೀಡಲಾಯಿತು.
ಪಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶೋಭಾ ಭಾಸ್ಕರ್ ಹಾಗೂ ಶ್ರೀಮತಿ ರೇಷ್ಮಾ ಸುದರ್ಶನ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜೇಸಿಐ ಕಾರ್ಕಳ ರೂರಲ್ ನ ಪೂರ್ವ ಅಧ್ಯಕ್ಷೆ ಶ್ರೀಮತಿ ವೀಣಾ ರಾಜೇಶ್ , ಸಾಣೂರು ಹಾಗೂ ಕಾಬೆಟ್ಟು ಕ್ಲಸ್ಟರ್ ನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಜ್ಯೋತಿ ನಾಯಕ್, ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯಸ್ಥ ಶ್ರೀ ಯೋಗೇಂದ್ರ ನಾಯಕ್, ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀ ಪ್ರಭಾತ್ ರಂಜನ್, ಆಂಗ್ಲ ಮಾಧ್ಯಮದ ಮುಖ್ಯಸ್ಥೆ ಶ್ರೀಮತಿ ಮಾಲಿನಿ ಕೆ, ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕ ಶ್ರೀ ಬಂಡಿವಡ್ಡರ್ ಹಾಗೂ ಸಂಸ್ಥೆಯ ಅಧ್ಯಾಪಕ ಪ್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಎಸ್ ವಿ ಟಿ ಅನುದಾನಿತ ಪ್ರಾಥಮಿಕ ಶಾಲೆ, ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಶಿಕ್ಷಕ ದೇವದಾಸ್ ಕೆರೆಮನೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.