ಕೊಲ್ಲೂರಿನ ಅರಶಿನ ಗುಂಡಿ ಫಾಲ್ಸ್‌ನಲ್ಲಿ, ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ಬಿದ್ದು ಭದ್ರಾವತಿ ಮೂಲದ ಶರತ್ ಸಾವನ್ನಪ್ಪಿದ ಸುದ್ದಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಸದ್ಯ ಶರತ್ ಸಾವಿನಿಂದ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ,ಅರಶಿನ ಗುಂಡಿ ಪಾಲ್ಸ್ ಗೆ ಹೋಗುವವರ ಬಗ್ಗೆ ನಿಗಾ ಇಟ್ಟಿದೆ.
ಅರಶಿನ ಗುಂಡಿ ಪಾಲ್ಸ್‌ಗೆ ಹೋಗುವ ದಾರಿಯಲ್ಲಿ, ನೀರಿನ ರಭಸ ಹೆಚ್ಚಾಗಿರುವ ಕಾರಣ ಯಾರೂ ಪಾಲ್ಸ್ಗೆ ತೆರಳಬಾರದು ಎಂದು ಬ್ಯಾನರ್ ಅಳವಡಿಸಿದೆ. ಅಲ್ಲದೆ, ಚೆಕ್ ಪೋಸ್ಟ್ನಲ್ಲೂ ಪರಿಚಯ ಇಲ್ಲದ ವ್ಯಕ್ತಿಯನ್ನು ವಿಚಾರಿಸಿ ಒಳ ಬಿಡಲಾಗುತ್ತಿದೆ. ಎಚ್ಚರಿಕೆ ಮೀರಿ ಪ್ರವೇಶ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ಕೂಡ ಅರಣ್ಯ ಇಲಾಖೆ ನೀಡಿದೆ.