ಉಡುಪಿ: ಆಗಸ್ಟ್ 5 6 ಮತ್ತು 7 ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಅಂಗವಾಗಿ ಉಡುಪಿಯ ಪೂರ್ಣಪ್ರಜ್ಞ ಅಡಿಟೋರಿಯಂ ನಲ್ಲಿ ಕೈಮಗ್ಗ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಆಕರ್ಷಕ ಕೈಮಗ್ಗ ಸೀರೆಗಳು ಮತ್ತು ಇತರ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ ಕೈಮಗ್ಗ ಸೀರೆಗಳ ಉತ್ಸವದಲ್ಲಿ ಜರಗಲಿದೆ.
ಪ್ರಾಚೀನ ಕೈ ಮಗ್ಗದ ಉದ್ಯಮ ಮತ್ತು ಉಡುಪಿ ಸೀರೆಗಳ ಪುನಶ್ಚೇತನ ಕಾರ್ಯಕ್ರಮದ ಅಂಗವಾಗಿ ಪದ್ಮಶಾಲಿ ನೇಕಾರ ಪ್ರತಿಷ್ಠಾನ ಮತ್ತು ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಈ ಮೇಳ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಉತ್ಸವ ಆಯೋಜನಾ ಸಮಿತಿಯ ಅಧ್ಯಕ್ಷ ಮಂಜುನಾಥ್ ಮಣಿಪಾಲ್ ಮತ್ತು ಪ್ರತಿಷ್ಠಾನ ಮತ್ತು ನೇಕಾರ ಸಹಕಾರ ಸಂಘದ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಜಂಟಿ ಪತ್ರಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.