ಕಾರ್ಕಳ :ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯು ತನ್ನ ಹೆಸರಾಂತ ಆರೋಗ್ಯ ತಜ್ಞರ ಸಮಿತಿಗೆ ಹೊಸ ತಜ್ಞರ ಸೇರ್ಪಡೆಯನ್ನು ಪ್ರಕಟಿಸಿದೆ. 1ನೇ ಆಗಸ್ಟ್ 2023 ರಿಂದ ಜಾರಿಗೆ ಬರುವಂತೆ , ಪ್ರಸಿದ್ಧ ಸಂತಾನೋತ್ಪತ್ತಿ ಮತ್ತು ಶಸ್ತ್ರಚಿಕಿತ್ಸಕ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಂತಾನೋತ್ಪತ್ತಿ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರತಾಪ್ ಕುಮಾರ್ ಎನ್ ಅವರು ಕಾರ್ಕಳದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುತ್ತಾರೆ. ಅವರು ತಮ್ಮ ಪರಿಣತಿ ಮತ್ತು ಅನುಭವದಿಂದ ಈಗಾಗಲೇ ಈ ಕ್ಷೇತ್ರದಲ್ಲಿ ಪ್ರಸಿದ್ದಿಯಾಗಿದ್ದಾರೆ. ಈಗ ಇಲ್ಲಿ ಪ್ರತಿ ಮಂಗಳವಾರ ಅಪರಾಹ್ನ ಗಂಟೆ 2:00 ರಿಂದ 4:40 ರವರೆಗೆ ಅಪಾಯಿಂಟ್‌ಮೆಂಟ್ ಆಧಾರದ ಮೇಲೆ ಸಮಾಲೋಚನೆಗಳಿಗೆ ಲಭ್ಯವಿರುತ್ತಾರೆ.
ಸಂತಾನೋತ್ಪತ್ತಿ ಮತ್ತು ಶಸ್ತ್ರಚಿಕಿತ್ಸಾ ಸೇವೆಗಳ ಈ ಸೇರ್ಪಡೆಯು ಆಸ್ಪತ್ರೆಗೆ ಮಹತ್ವದ ಮೈಲಿಗಲ್ಲಾಗಿ ದೆ. ಇದು ಈಗಿರುವ ಸಾಮಾನ್ಯ ವೈದ್ಯಕೀಯ, ಸಾಮಾನ್ಯ ಮತ್ತು ಲ್ಯಾಪರೊಸ್ಕೋಪಿಕ್ ಶತ್ರಚಿಕಿತ್ಸೆ , ಮಕ್ಕಳ ವಿಭಾಗ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸೆ, ನೇತ್ರಚಿಕಿತ್ಸೆ , ಹ್ರದ್ರೋಗ , ಕಿವಿ ಮೂಗು ಗಂಟಲು, ನರವಿಜ್ಞಾನ (ನ್ಯೂರೊಲಜಿ), ಮೂತ್ರಪಿಂಡ (ನೆಫ್ರಾಲಜಿ), ಮೂತ್ರಶಾಸ್ತ್ರ (ಯುರೊಲೊಜಿ), ಉಪಶಾಮಕ ಔಷಧ , ಮಕ್ಕಳ ರಕ್ತಶಾಸ್ತ್ರ & ಕ್ಯಾನ್ಸರ್, ಶಸ್ತ್ರಚಿತ್ಸಾ ಕ್ಯಾನ್ಸರ್ , ಚರ್ಮ, ಮಾನಸಿಕ ಆರೋಗ್ಯ , ರೇಡಿಯೋಲೋಜಿ ಮತ್ತು ಪ್ಯಾಥೋಲಾಜಿ (ಅತ್ಯಾಧುನಿಕ ತಂತ್ರಜ್ಞಾನದ ಲ್ಯಾಬ್ ಪರೀಕ್ಷಾ) ಸೇವೆಗಳಿಗೆ ಪೂರಕವಾಗಿದೆ.
ಡಾ.ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದ ಮುಖ್ಯ ವೈದ್ಯಧಿಕಾರಿ ಡಾ ಕೀರ್ತಿನಾಥ ಬಲ್ಲಾಳ ಮಾತನಾಡಿ, “ನಮ್ಮ ಆರೋಗ್ಯ ವೃತ್ತಿಪರರ ತಂಡಕ್ಕೆ ಡಾ. ಪ್ರತಾಪಕುಮಾರ್ ಎನ್ ಅವರನ್ನು ಸ್ವಾಗತಿಸಲು ನಾವು ಸಂತೋಷಪಡುತ್ತೇವೆ. ಈ ಸಂತಾನೋತ್ಪತ್ತಿ ಮತ್ತು ಶಸ್ತ್ರಚಿಕಿತ್ಸಾ ಸೇವೆಗಳ ಸೇರ್ಪಡೆಯು, ಸಕಾಲದಲ್ಲಿ ರೋಗನಿರ್ಣಯಮಾಡಿ ನಮ್ಮ ಗುಣಮಟ್ಟದ ವೈದ್ಯಕೀಯ ಆರೈಕೆ ಮೂಲಕ ಸಮುದಾಯಕ್ಕೆ ನೀಡಲು ಇನ್ನಷ್ಟು ಸಹಕಾರಿಯಾಗಲಿದೆ” ಎಂದು ಹೇಳಿದರು.
ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಅಥವಾ ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ 9731601150 ಅಥವಾ 08258 230583 ಅನ್ನು ಸಂಪರ್ಕಿಸಬಹುದು.