ಕಟಪಾಡಿ,:- ಎಸ್‌ವಿ ಎಸ್ ಹೈಸ್ಕೂಲ್ ಕಟಪಾಡಿಯಲ್ಲಿ ಜು.29,30 ರಂದು ಹಲಸು ಮೇಳ 2023 ನಡೆಯಲಿದೆ.
ಏಣಗುಡ್ಡೆ ಯುವಜನ ಸೇವಾ ಸಂಘ ಮತ್ತು ತೋಟಗಾರಿಕೆ ಮತ್ತು ಕೃಷಿ ಇಲಾಖೆ, ಸಹಯೋಗದಲ್ಲಿ ಹಲಸು ಮೇಳ ಆಯೋಜಿಸಲಾಗಿದೆ
ಬೆಳಗ್ಗೆ 9 ರಿಂದ ಸಂಜೆ 7ರ ತನಕ ನಡೆಯುವ ಮೇಳದಲ್ಲಿ ವಿವಿಧ ಬಗೆಯ ಹಲಸು ಪ್ರದರ್ಶನ, ಮಾರಾಟ, ವಿವಿಧ ತಳಿಗಳ ಹಲಸು ಗಿಡ ,ಸಾವಯುವ ಉತ್ಪನ್ನಗಳು, ಗೆಡ್ಡೆ ಗೆಣಸು, ವಿವಿಧ ತರಕಾರಿ ಸಸಿಗಳು, ದೇಸಿ ತರಕಾರಿ ಬೀಜ, ಹಲಸಿನ ಖಾದ್ಯ ಗಳು, ಹಲಸಿನ ಹೋಳಿಗೆ, ಐಸ್ ಕ್ರೀಮ್ ,ಕಲ್ಪ ರಸಗಳು ಇವೆ. ಅಲ್ಲದೆ ಹಲಸಿನ ವಿವಿಧ ಖಾದ್ಯಗಳು, ದೇಸಿ ಗೋ ಉತ್ಪನ್ನಗಳು ,ಆಯುರ್ವೇದಿಕ್ ಉತ್ಪನ್ನಗಳು ,ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.