ಕಾರ್ಕಳ : ಪಡು ತಿರುಪತಿ ಖ್ಯಾತಿಯ ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀ ಪುರುಷೋತ್ತಮ ಅಧಿಕಮಾಸದಲ್ಲಿ ಜಪಿಸುವ 33 ಮಂತ್ರಗಳಿಗೆ ಮೂವತ್ತಮೂರು ಶ್ರೀ ವೆಂಕಟ್ರಮಣ ದೇವರಿಗೆ ಪ್ರದಕ್ಷಿಣೆ ಕಾರ್ಕಳ ಜಿ. ಎಸ್.ಬಿ ಸಮಾಜ ದ ಭಜಕರು ಹಾಗೂ ದೇವರ ದರ್ಶನಕ್ಕೆ ಬಂದ ಭಕ್ತಾದಿಗಳು ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಿದರು.
ಯಾವುದೇ ಗ್ರಹಚಾರ ದೋಷ ಇದ್ದರೆ ಈ ಪ್ರದಕ್ಷಿಣೆ ಯಿಂದ ನಿವಾರಣೆ ಯಾಗುತ್ತದೆ ಎಂಬ ನಂಬಿಕೆಯಿದೆ ಲೋಕ ಕಲ್ಯಾಣಕ್ಕೆ ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಕ್ರಮಗಳು ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ ಎಂದು ಅರ್ಚಕರಾದ ರವೀಂದ್ರ ಪುರಾಣಿಕ್ ಮಾದ್ಯಮಕ್ಕೆ ತಿಳಿಸಿದರು.