ಕಾರ್ಕಳ : ಖಾಸಗಿ ಬಸ್ ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿಯಾದ ಘಟನೆ ಸೋಮವಾರ (ಜು. 24) ಬೆಳಿಗ್ಗೆ ಬೈಲೂರು ಬಸ್ರಿ ಶಾಲೆಯ ಮುಂಭಾಗ ಸಂಭವಿಸಿದೆ.
ಪರಿಣಾಮವಾಗಿ ಬಸ್ ಚಾಲಕ ಮತ್ತು ಪ್ರಯಾಣಿಕರು ಗಾಯಗೊಂಡಿದ್ದಾರೆ. ಉಡುಪಿಯಿಂದ ಕಾರ್ಕಳಕ್ಕೆ ಬರುತ್ತಿದ್ದ ಬಿಎಂಎಸ್ ಬಸ್ ಮತ್ತು ಕಾರ್ಕಳದಿಂದ ಬೈಲೂರಿಗೆ ಸಾಗುತ್ತಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿದೆ.
ಬಸ್ ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದ್ದು ಬಸ್ ಚಾಲಕ ಸೇರಿ ಪ್ರಯಾಣಿಕರಿಗೆ ಗಾಯಗಳಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.