ಹೈಬ್ರೀಡ್ ನ್ಯೂಸ್ ಕನ್ನ ಸುದ್ದಿ ವಾಹಿನಿ ಹಾಗೂ ಮಹಿಳಾ ಧ್ವನಿ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ (ರಿ)ಕೊಪ್ಪಳ ಇವರ ಸಹಭಾಗಿತ್ವದಲ್ಲಿ ಬೆಂಗಳೂರಿನ ಸುಚಿತ್ರಾ ಆಡಿಟೋರಿಯಂ ಬನಶಂಕರಿಯಲ್ಲಿ ಕರುನಾಡ ಸಾಧಕರು -2023 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹನುಮಂತ ಹಳ್ಳಿಕೇರಿ ಹಳ್ಳಿಯ ಪ್ರತಿಭೆಗಳನ್ನು ರಾಜಧಾನಿಗೆ ಕರೆತಂದು ರಾಜ್ಯಮಟ್ಟದಲ್ಲಿ ಅವರನ್ನು ಮುಖ್ಯ ವಾಹಿನಿಗೆ ಪರಿಚಯಿಸುತ್ತಿರುವ ಹೈಬ್ರೀಡ್ ನ್ಯೂಸ್ ಕಾರ್ಯ ಶ್ಲಾಘನೀಯ ಎಂದರು.
ಇದೇ ವೇಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿಶೋರಿ ಬೂದನೂರು ಹೈಬ್ರೀಡ್ ನ್ಯೂಸ್ ಇದು ಎಲ್ಲರ ಮೆಚ್ಚುಗೆ ಪಡೆದ ಸಂಚಾರಿವಾಹಿನಿಯಾಗಿದೆ.ಬೆಳೆಯುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸಿ ಮತ್ತಷ್ಟು ಬೆನ್ನುತಟ್ಟುವ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಮೆಚ್ಚಲೆಬೇಕು ಎಂದರು.
ಕೆ.ಎಂ.ಖಲೀಲ್ ಅವರು 20 ವರ್ಷಗಳಿಂದ ಮಾದ್ಯಮ ಕ್ಷೇತ್ರದಲ್ಲಿ ಸೇಸೇವೆಸಲ್ಲಿಸಿದ್ದಾರೆ ಅವರ ಸೇವೆಯನ್ನು ಗುರುತಿಸಿ 2023 ನೇ ಸಾಲಿನ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಿಯದರ್ಶಿನಿ ಮುಂಡರಗಿಮಠ, ದೊಡ್ಡಬಸಪ್ಪ ವೈ,ಸಂಗೀತಾ ಹೊಳ್ಳಾ,ಪೂಜಾ ಲೋಕಾಪುರ, ಅನ್ನಪೂರ್ಣ ಸಂಗೋಳಗಿ ,ರೇಖಾ ಬಿಜಾಪುರ ಮತ್ತಿತರರು ಉಪಸ್ಥಿತಿ ಇದ್ದರು.
ಸಂಘಟಕ ಬಿ.ಎನ್.ಹೊರಪೇಟಿ ಪ್ರಾಸ್ತಾವಿಕ ಮಾತನಾಡಿದರು.ಸಾಂಸ್ಕೃತಿಕ ಕಾರ್ಯಕ್ರಮ ನೆರೆವೆರಿತು.ತೇಜಸ್ವಿನಿ ಚರಣ್ ಹಾಗೂ ಅಂಬಿಕಾ ನಿರೂಪಿಸಿ ವಂದಿಸಿದರು