ಉಡುಪಿ : ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಸರಳೇಬೆಟ್ಟು, ಪರಿವಾರ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ಸ್ನೇಹ ಸಂಗಮ ಸರಳೇಬೆಟ್ಟು ಮಣಿಪಾಲ ಇವರ ಸಹಭಾಗಿತ್ವದಲ್ಲಿ ಸರಳೇಬೆಟ್ಟು ರತ್ನ ಸಂಜೀವ ಕಲಾಮಂಡಲದ ಆವರಣದಲ್ಲಿ ಹಮ್ಮಿಕೊಳ್ಳಲಾದ ಹೂವು – ಹಣ್ಣುಗಳ ಗಿಡಗಳ ಉಚಿತ ವಿತರಣಾ ಮೇಳ ‘ಸಸ್ಯೋತ್ಸವಕ್ಕೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಚಾಲನೆ ನೀಡಿದರು.
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಪ್ರತಿಯೊಬ್ಬ ನಾಗರಿಕ ತನ್ನ ಮನೆಯ ಪರಿಸರದಲ್ಲಿ ಸಸ್ಯಗಳನ್ನು ನೆಡುವ ಮೂಲಕ ಪರಿಸರ ರಕ್ಷಿ ಸುವ ಕೆಲಸ ಮಾಡಬೇಕಾಗಿದೆ. ಸಸ್ಯಗಳನ್ನು ನೆಟ್ಟು ಅದನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಗಳು ನಿತ್ಯ ನಿರಂತರವಾಗಿ ನಡೆದರೆ ಪರಿಸರದ ಜಾಗೃತಿ ಸಾಧ್ಯವಾಗುತ್ತದೆ. ನಾವೆಲ್ಲರೂ ಕನಿಷ್ಟ ಹತ್ತು ಗಿಡಗಳನ್ನು ನಡೆಯುವ ಮೂಲಕ ಸಾಲು ಮರದ ತಿಮ್ಮಕ್ಕ ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು ಎಂದರು.
ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿದರು. ಈ ಸಂದರ್ಭದಲ್ಲಿ ಶಿವಪೇರಣಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಠಾಕೂರ್, ಸ್ನೇಹಸಂಗಮ ಸರಳೇಬೆಟ್ಟು ಅಧ್ಯಕ್ಷ ಗುರುರಾಜ್ ಭಂಡಾರಿ ಸರಳೇಬೆಟ್ಟು, ಪ್ರಧಾನ ಕಾರ್ಯದರ್ಶಿ ಸಂದೇಶ್ ಪ್ರಭು, ಹೆಚ್ಚುವರಿ ಎಸ್ಪಿ ಸಿದ್ಧಲಿಂಗಪ್ಪ, ಮಾಜಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಮೊದಲಾದವರು ಉಪಸ್ಥಿತರಿದ್ದರು.