ಮಣಿಪಾಲ :ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದಲ್ಲಿರುವ ಭವಾನಿ ಎಂಬ ಹೆಸರಿನ ಮನೆಯಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ ಹಾಕೆ ಮಚ್ಚೀಂದ್ರ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ವಿದ್ಯಾರತ್ನ ನಗರದ ಒಂದು ಮನೆಯ ಮೇಲೆ ದಾಳಿ ಮಾಡಿ ಅನೈತಿಕ ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ಸಲಾಮತ್, ಚಂದ್ರಹಾಸ ಎಂಬುವವರನ್ನು ವಶಕ್ಕೆ ಪಡೆದು, ಆಪಾದಿತರು ವೇಶ್ಯಾವಾಟಿಕೆ ವ್ಯವಹಾರ ನಡೆಸಲು ಬಳಸಿಕೊಂಡಿದ್ದ 5 ಜನ ನೊಂದ ಮಹಿಳೆಯರಲ್ಲಿ 3 ಜನ ಬೆಂಗಳೂರು ಮೂಲದ ನಿವಾಸಿಗಳಾಗಿದ್ದು, ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್ ಹಾಗೂ ಮುಂಬೈ ವಾಸಿಗಳಾಗಿದ್ದು, ಅವರನ್ನು ರಕ್ಷಿಸಲಾಯಿತು.
ಅಲ್ಲದೇ ವೇಶ್ಯಾವಾಟಿಕೆ ವ್ಯವಹಾರಕ್ಕೆ ಬಳಸಿದ ಕಾಂಡೋಮ್‌ಗಳು, 4 ಮೊಬೈಲ್ ಫೋನ್, 1 ಕಾರು , 2 ಮೋಟಾರ್ ಸೈಕಲ್ ಹಾಗೂ ನಗದು ರೂ 10,000/- ಯನ್ನು ಸ್ವಾದೀನಪಡಿಸಿಕೊಂಡು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅನೈತಿಕ ಚಟುವಡಟಿಕೆ ಮಾಡಲು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಅನೈತಿಕ ಚಟುವಟಿಕೆಗೆ ಕೊಠಡಿಗಳನ್ನು ಒದಗಿಸಿದ ಪ್ರಮುಖ ಆರೋಪಿ ಖಾಲಿದ್ ಎಂಬಾತ ಸ್ಥಳದಿಂದ ಪರಾರಿಯಾಗಿರುತ್ತಾನೆ. ಅದೇ ರೀತಿ ಶಾಂತಿನಗರದ ಮನೆಯ ಮೇಲೆ ಬ್ರಹ್ಮಾವರ ಸಿ.ಪಿ.ಐ ಶ್ರೀ ದಿವಾಕರ್ ನೇತೃತ್ವದಲ್ಲಿ ಧಾಳಿ ಮಾಡಿ ಸದರಿಮನೆಯನ್ನು ವೇಶ್ಯಾವಾಟಿಕೆಗೆ ಚಟುವಟಿಕೆಗೆ ಬಳಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಸದರಿ ಮನೆಯನ್ನು ಜಫ್ತುಮಾಡಲಾಗಿದ್ದು, ತನಿಖೆ ಮುಂದುವರೆದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಅಕ್ಷಯ್ ಮಚಿಂದ್ರ ಹಾಕೆ (ಐ.ಪಿ.ಎಸ್) ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಸಿದ್ದಲಿಂಗಪ್ಪ ಟಿ, (ಕೆ ಎಸ್ ಪಿ ಎಸ್) ದಿನಕರ ಕೆ.ಪಿ ಡಿ.ವೈ.ಎಸ್ಪಿ ಉಡುಪಿ ರವರ ನಿರ್ದೇಶನದಂತೆ ಬ್ರಹ್ಮಾವರ ಸಿ.ಪಿ.ಐ ಶ್ರೀ ದಿವಾಕರ್ ಹಾಗೂ ದೇವರಾಜ ಟಿ.ವಿ ಪೊಲೀಸ್ ನಿರೀಕ್ಷಕರು ಮಣಿಪಾಲ ಠಾಣೆ ರವರ ನೇತೃತ್ವದಲ್ಲಿ ಅಬ್ದುಲ್ ಖಾದರ್ ಪಿ.ಎಸ್.ಐ ಮಣಿಪಾಲ ಠಾಣೆ , ಹೆಚ್ ಸಿ ಸುಕುಮಾರ್ ಶೆಟ್ಟಿ, ಹೆಚ್ ಸಿ ಇಮ್ರಾನ್, ಹೆಚ್ ಸಿ ಸುರೇಶ್ ಕುಮಾರ್, ಮ.ಹೆಚ್‌ಸಿ ಜ್ಯೋತಿ ನಾಯಕ್, ಪಿ ಸಿ ಅರುಣ, ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.