ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ತೋಟಗಾರಿಕಾ, ಉದ್ಯಾನವನ ಮತ್ತು ಕೈತೋಟಗಳ ಘನತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಸ್ಕರಿಸುವ ಬಗ್ಗೆ ಘನತ್ಯಾಜ್ಯ ವ್ಯವಸ್ಥಾಪನಾ ನಿಯಮಗಳು 2016ರನ್ವಯ 4(ಡಿ) ಮತ್ತು 15(ಡಿ)ಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತೋಟಗಾರಿಕಾ, ಉದ್ಯಾನವನ ಮತ್ತು ಕೈತೋಟಗಳ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲು ವ್ಯವಸ್ಥೆಯನ್ನು ಮಾಡಲು ಕಟ್ಟಡದ ಮಾಲಕರೇ ತಮ್ಮ ಸ್ವಂತ ವಾಹನದಲ್ಲಿ ನಿಗದಿತ ಸ್ಥಳದಲ್ಲಿ ಹಾಕಿದ್ದಲ್ಲಿ ಪ್ರತಿ ಲೋಡಿಗೆ ರೂ.1,000 (3.0 ಕ್ಯೂಬಿಕ್ ಸಾಮರ್ಥ್ಯದ ಟಿಪ್ಪರ್) ಹಾಗೂ ನಗರಸಭಾ ವತಿಯಿಂದ ಸಂಗ್ರಹಿಸಿ ವಿಲೇ ಮಾಡಲು ಪ್ರತಿ ಲೋಡಿಗೆ ರೂ. 2,500 (3.0 ಕ್ಯೂಬಿಕ್ ಸಾಮರ್ಥ್ಯದ ಟಿಪ್ಪರ್) ಹಾಗೂ ಹೆಚ್ಚುವರಿ ಟ್ರಿಪ್‌ಗೆ ರೂ. 2,000, ಅರ್ಧ ಲೋಡಿಗೆ ರೂ. 1,000 ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.