ಉಡುಪಿ: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟ ಕಾಲೇಜು ವಿದ್ಯಾರ್ಥಿನಿ ನಿಖಿತಾ ಅವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ 20 ಲಕ್ಷ. ರೂ.ಗಳ ಪರಿಹಾರ ಧನವನ್ನು ಹಸ್ತಾಂತರ ಮಾಡಿದೆ.
ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಡಾ. ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಕುಟುಂಬದ ನೋವಿಗೆ ಸ್ಪಂದಿಸಿದ ಆಸ್ಪತ್ರೆ ವೈದ್ಯರು ಹಾಗೂ ವೈದ್ಯಕೀಯ ಸಂಘಟನೆಗಳ ಸ್ಪಂದನೆ ಶ್ಲಾಘನೀಯ. ಈ ಬಗ್ಗೆ ಧ್ವನಿಯೆತ್ತಿ ಸಂಘಟಿತವಾದ ಅಳಲು ತೋಡಿಕೊಂಡು ಸಾಮಾಜಿಕ ನ್ಯಾಯ ಕೊಡಿಸಲು ಪಣತೊಟ್ಟಿದ್ದ ಸರ್ವರೂ ಅಭಿನಂದನರ್ಹರು. ಸಂಘ ಸಂಸ್ಥೆ ಸಂಘಟನೆಗಳು ಈ ರೀತಿಯ ಸಮಾಜಮುಖಿ ಕೆಲಸಗಳನ್ನ ಮಾಡಬೇಕು. ನೊಂದವರ ಕಣ್ಣೀರು ಒರೆಸಬೇಕು ಎಂದರು.
ಘಟನೆ ಬಳಿಕ ಆರಂಭವಾದ ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳ ಹೋರಾಟದ ಕಾವು, ಹಲವು ಮನವಿಗಳು ಜೊತೆಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಜೊತೆಗೆ ಕುಲಾಲ ಸಮುದಾಯ ಸಂಘಟನೆಯ ನಾಯಕರು/ಸಾಮಾಜಿಕ ಹೋರಾಟಗಾರರು ನಿರಂತರ ಮಾತುಕಥೆಯನ್ನು ನಡೆಸಿದ್ದರ ಪರಿಣಾಮ ಇಂದು ಫಲ ಸಿಕ್ಕಂತಾಗಿದೆ.