ವಿಧಾನಸಭೆಯಲ್ಲಿ ಅಸಭ್ಯವಾಗಿ ವರ್ತನೆ ತೋರಿದಂತ ಆರೋಪದ ಹಿನ್ನಲೆಯಲ್ಲಿ ಹತ್ತು ಮಂದಿ ಬಿಜೆಪಿ ಸದಸ್ಯರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಕಲಾಪದ ವೇಳೆ ಸದನದಲ್ಲಿಅಸಭ್ಯ ವರ್ತನೆ ತೋರಿದ ಆರೋಪದ ಹಿನ್ನಲೆ ಹತ್ತು ಮಂದಿ ಬಿಜೆಪಿ ಸದಸ್ಯರನ್ನು ಸ್ಪೀಕರ್ ಯು.ಟಿ ಖಾದರ್ ಅಮಾನತುಗೊಳಿಸಿದ್ದಾರೆ. ಆರ್ ಅಶೋಕ್, ಡಾ. ಅಶ್ವತ್ಥ ನಾರಾಯಣ್, ಅರಗ ಜ್ಞಾನೇಂದ್ರ, ವಿ.ಸುನೀಲ್ ಕುಮಾರ್, ವೇದವ್ಯಾಸ್ ಕಾಮತ್, ಯಶಪಾಲ್ ಸುವರ್ಣ, ಧೀರಜ್ ಮುನಿರಾಜ್, ಉಮಾನಾಥ್ ಕೋಟ್ಯಾನ್, ಅರವಿಂದ್ ಬೆಲ್ಲದ್, ವೈ ಭರತ್ ಶೆಟ್ಟಿಯವರನ್ನು ಅಧಿವೇಶನ ಮುಗಿಯುವವರೆಗೂ ಅಮಾನತುಗೊಳಿಸಲಾಗಿದೆ.