ಉಡುಪಿ :ಮಾರಾಟ ಮಾಡಲು ಮಾದಕ ವಸ್ತುವನ್ನು ಹೊಂದಿದ್ದ ಐವರು ಆರೋಪಿಗಳನ್ನು ಮಣಿಪಾಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಪುವಿನ ಮಲ್ಲಾರು ಗ್ರಾಮದ ಮುಝಾಮಿಲ್ (27), ಮಹಮ್ಮದ್ ಪಾಝಿಲ್ (19), ಮಂಗಳೂರಿನ ಮಾಣಿಯ ಶಿಯಾಬ್, ಉಡುಪಿಯ ಸಾಹಿಲ್, ಬೈಂದೂರಿನ ರಿಜ್ವಾನ್ ಎಂಬುವವರು ಪೊಲೀಸರು ವಶಕ್ಕೆ ಪಡೆದ ಆರೋಪಿಗಳು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಣಿಪಾಲ ಠಾಣಾ ಪೊಲೀಸರು ಶಿವಳ್ಳಿ ಗ್ರಾಮದ ಶೀಂಬ್ರಾ ಬ್ರಿಡ್ಜ್ ಬಳಿ ದಾಳಿ ಮಾಡಿ ಈ ಐವರನ್ನು ವಶಕ್ಕೆ ಪಡೆದು, ಆರೋಪಿಗಳ ಬಳಿ ಇದ್ದ ಅಂದಾಜು 12, 000 ರೂ. ಮೌಲ್ಯದ 250 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು, 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.