ಮಲ್ಪೆ : ಸಮುದ್ರದ ಅಲೆಯ ಹೊಡೆತಕ್ಕೆ ಮಲ್ಪೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡ ದೋಣಿಯೊಂದು ಮುಳುಗಡೆಯಾಗಿದೆ. ಮಲ್ಪೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಈ ದುರ್ಘಟನೆ ಸಂಭವಿಸಿದ್ದು ಈ ನಾಡದೋಣಿಯು ಮಂಗಳೂರಿನಿಂದ ಮಲ್ಪೆಯತ್ತ ಬರುತ್ತಿತ್ತು ಎನ್ನಲಾಗಿದೆ.
ಐದು ಜನ ಮೀನುಗಾರರು ನಾಡದೋಣಿಯಲ್ಲಿದ್ದರು ಎಂದು ತಿಳಿದುಬಂದಿದೆ.
ದೋಣಿಯು ಮುಳುಗುತ್ತಿರುವ ವಿಷಯ ತಿಳಿದು ತಕ್ಷಣ ಕಾರ್ಯಪ್ರವತ್ತರಾದ ಈಶ್ವರ್ ಮಲ್ಪೆ ಅವರ ತಂಡ ದೋಣಿಯ ಮೂಲಕ ತೆರಳಿ ಐದು ಜನ ಮೀನುಗಾರರನ್ನು ರಕ್ಷಿಸಿದ್ದಾರೆ
ಪುನಃ ಮತ್ತೊಂದು ದೋಣಿಯ ಮೂಲಕ ಸಮುದ್ರದ ಅಲೆಗಳನ್ನು ಲೆಕ್ಕಿಸದೆ ಮುಳುಗುತ್ತಿರುವ ದೋಣಿಯ ಬಳಿ ತೆರಳಿ ಸುಮಾರು ಮೂರು ಲಕ್ಷ ರೂಪಾಯಿ ಬೆಲೆಬಾಳುವ ಎರಡು ಎಂಜಿನ್ ಹಾಗೂ ಇಂಧನ ಗಳನ್ನು ಸುರಕ್ಷಿತವಾಗಿ ತರುವಲ್ಲಿ ಯಶಸ್ವಿಯಾದರು.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಈಶ್ವರ್ ಮಲ್ಪೆ ಜೊತೆಗೆ ಬಿಲಾಲ್ ಮಲ್ಪೆ, ರವಿ, ಅನಿಲ್ ಹಾಗೂ ನಾಲ್ವರು ಕೈಜೋಡಿಸಿದರು.