ಕುಂದಾಪುರ ಸಮೀಪದ ಕಾಳಾವಾರ ಎಂಬಲ್ಲಿ ನಿನ್ನೆರಾತ್ರಿ ಸುಮಾರು 9 ಗಂಟೆಗೆ ಗೂಡ್ಸ್ ರೈಲು ಬರುವಾಗ ಹಳಿಯ ಮಧ್ಯದಲ್ಲಿ ನಿಂತು ಕೊಂಡಿದ್ದ ಯುವಕನೋರ್ವ ರೈಲಿನ ಹಾರ್ನ್ ಶಬ್ದ ಹಾಕಿದ್ದರೂ ಹಳಿಯಿಂದ ಕದಲುತ್ತಿರಲಿಲ್ಲ. ಇದನ್ನು ನೋಡಿದ ರಾತ್ರಿ ಪಾಳಿ ಗಸ್ತು ನಿರ್ವಹಿಸುತ್ತಿದ್ದ ಕುಂದಾಪುರ ರೈಲ್ವೆ ಸಿಬ್ಬಂದಿ ನಿತ್ಯಾನಂದ ಜಿ ಮತ್ತು ಅವರ ಸಿಬ್ಬಂದಿಗಳು 200 ಮೀಟರ್ ಓಡಿ ಹೋಗಿ ಯುವಕನನ್ನು ಹಳಿಯಿಂದ ಹೊರ ಎಳೆದು ಆತನ ಪ್ರಾಣ ರಕ್ಷಿಸಿದ್ದಾರೆ. ಎಳೆದ ರಭಸಕ್ಕೆ ಕೈ ಹಾಗೂ ಭುಜಕ್ಕೆ ಸ್ವಲ್ಪ ಗಾಯವಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾನೆ.
ಬಳಿಕ ಸಿಬ್ಬಂದಿಗಳು ರೈಲ್ವೆ ಗೇಟಿಗೆ ಕರೆದುಕೊಂಡು ಹೋಗಿ ರೈಲ್ವೆ ಸಿಬ್ಬಂದಿ ಜಗದೀಶ್ ದೇವಾಡಿಗ 108 ಕ್ಕೆ ಫೋನ್ ಮಾಡಿ ಆಸ್ಪತ್ರೆಗೆ ಸಾಗಿಸಲಾಗಿದೆ.