ಪಡುಕುತ್ಯಾರಿನ ಆನೆಗುಂದಿ ಮಹಾಸಂಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ನಾಗಧರ್ಮೇಂದ್ರ ಸರಸ್ವತಿ ವಿದ್ಯಾರ್ಥಿ ಭವನವನ್ನು ಶನಿವಾರ (15-07-2023 )ಕಟಪಾಡಿ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧಿಪತಿ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ. ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಂಸ್ಕಾರಯುತ ಶಿಕ್ಷಣದಿಂದ ಮಕ್ಕಳನ್ನು ಸಮಾಜದ ಆಸ್ತಿಗಳನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಅದಕ್ಕೆ ಪೂರಕವಾಗಿ ಮಠದಲ್ಲಿ ವೈದಿಕ ಮತ್ತು ಲೌಖಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಹಿಂದೂ ಸಮಾಜದ ಏಳಿಗೆಗಾಗಿ ಕಾಳಹಸ್ತೇಂದ್ರ ಶ್ರೀಗಳು ನೀಡುತ್ತಿರುವ ಮಾರ್ಗದರ್ಶನ ಮತ್ತು ಕೊಡುಗೆ, ಸ್ಮರಣೀಯವಾಗುವಂತದ್ದಾಗಿದೆ. ಹಲವು ಸಂಸ್ಕೃತಿಗಳ ಬೀಡಾಗಿರುವ ನಮ್ಮ ನಾಡಿನಲ್ಲಿ ಶ್ರೀಗಳ ಸೇವಾಕಾರ್ಯಗಳು ನಿರಂತರವಾಗಿ ಮುಂದುವರಿಯಲಿ. ಸಂಸ್ಕಾರಯುತವಾದ ಬದುಕು ಇಂದಿನ ಮತ್ತು ಮುಂದಿನ ಅಗತ್ಯತೆಯಾಗಿದ್ದು ಎಲ್ಲರಿಗೂ ಆದರ್ಶವಾಗುವಂತದ್ದಾಗಿದೆ ಎಂದರು.
ಆನೆಗುಂದಿ ಪ್ರತಿಷ್ಠಾನ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕರಾದ ಮಿಥುನ್ ಎಂ.ರೈ ಕ್ಯಾ.ಬ್ರಿಜೇಶ್ ಚೌಟ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಶ್ರೀನಾಗ ಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ಪ್ರಧಾನ ಸಂಚಾಲಕ ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಶ್ರೀ ಸರಸ್ವತೀ ಎಜುಕೇಶನ್ ಟ್ರಸ್ಟ್ (ಅಸೆಟ್ )ಉಪಾಧ್ಯಕ್ಷ ವಿವೇಕ್ ಆಚಾರ್ಯ ಮಂಚಕಲ್, ಸರಸ್ವತೀ ಗೋವು – ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಸುಂದರ ಆಚಾರ್ಯ ಬೆಳುವಾಯಿ, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ,ಅಧ್ಯಕ್ಷ ಗಣೇಶ್ ಆಚಾರ್ಯ ಕೆಮ್ಮಣ್ಣು, ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಕುತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಎಸ್ ಆಚಾರ್ಯ ಕುತ್ಯಾರು, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಹಾಗೂ ಪ್ರತಿಷ್ಠಾನದ ಪ್ರಥಮ ವಿಶ್ವಸ್ಥರಾದ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಶ್ರೀನಾಗ ಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ ವಿದ್ಯಾರ್ಥಿ ಹಾಗೂ ಮಹಾ ಸಂಸ್ಥಾನದಲ್ಲಿ ವಸತಿ ವ್ಯವಸ್ಥೆ ಇರುವ ವಿದ್ಯಾರ್ಥಿಗಳಿಗಾಗಿ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಒಂದು ಕೋಟಿ ರೂಪಾಯಿ ಸೇರಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಅಂತಸ್ತಿನ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ.
ಜನ್ಮ ವರ್ಧಂತಿ ಅಂಗವಾಗಿ ವಿಶೇಷ ಹೋಮ, ಹವನ, ವೈದಿಕ ಕಾರ್ಯಕ್ರಮಗಳು, ಗಣಪತಿ ಅಥರ್ವಶೀರ್ಷ ಹೋಮ, ನವಗ್ರಹ ಹೋಮ, ಧನ್ವಂತರಿ ಹೋಮ, ರುದ್ರ ಹೋಮ, ಮಹಾ ಮೃತ್ಯುಂಜಯ ಹೋಮ, ತುಲಾಭಾರ ಸೇವೆ, ಗುರುಪಾದುಕ ಪೂಜೆ ಸಂಪನ್ನಗೊಂಡಿತು.
ಆಸ್ಥಾನ ವಿದ್ವಾನ್ ಪದವಿ ಸ್ವೀಕರಿಸಿದ ವೇ.ಬ್ರ.ಶ್ರೀ ಶಂಕರಾಚಾರ್ಯ ಕಡ್ಲಾಸ್ಕರ್ ಪಂಡಿತ್ ಹುಬ್ಬಳ್ಳಿ ಮಾತನಾಡಿ, ಗುರುವಿನ ಅನುಗ್ರಹವೇ ಸಮಾಜಕ್ಕೆ ಶ್ರೀರಕ್ಷೆ. ಶ್ರೀಮದ್ ಆನೆಗುಂದಿ ಮಠದ ಕಾಳಹಸ್ತೇಂದ್ರ ಶ್ರೀಗಳನ್ನು ಕುಲಗುರುಗಳನ್ನಾಗಿ ಸ್ವೀಕರಿಸಿರುವುದು ವಿಶ್ವಕರ್ಮ ಸಮಾಜಕ್ಕೆ ಶ್ರೇಷ್ಟ ಗೌರವವಾಗಿದೆ. ಕುಲಗುರುಗಳ ಆಶೀರ್ವಾದ, ಅನುಗ್ರಹ, ಮಾರ್ಗದರ್ಶನದೊಂದಿಗೆ ಸಮಾಜ ಉತ್ತರೋತ್ತರವಾಗಿ ಬೆಳಗುತ್ತಿದೆ, ಇನ್ನಷ್ಟು ಬೆಳಗಲಿದೆ ಎಂದರು.
ವೇದ ಪಾಠ ಶಾಲೆ ವಿದ್ಯಾರ್ಥಿಗಳಾದ ಮಂಜುನಾಥ್ ಶರ್ಮ, ಶಶಾಂಕ್ ಶರ್ಮ, ಶಿವಶೇಖರ ಶರ್ಮ ಅವರನ್ನು ಗೌರವಿಸಲಾಯಿತು.
ಶ್ರೀ ಆನೆಗುಂದಿ ಪ್ರತಿಷ್ಠಾನ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವ”ಸಿದ್ದರು. ಆಸ್ಥಾನ ವಿದ್ವಾಂಸ ಜ್ಯೋತಿಷ್ಯ ವಿದ್ವಾನ್ ಶ್ರೀ ಉಮೇಶ್ ಆಚಾರ್ಯ ಪಡೀಲು, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಂಚಸಿಂಹಾಸನ ವಿಕಾಸ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು ಮಹಾಸಂಸ್ಥಾನದ ಕಾಳಿಕಾಂಬಾ ವಿಶ್ವಕರ್ಮ ದೇವಾಲಯಗಳ ಧರ್ಮದರ್ಶಿಗಳಾದ ಕೆ. ಕೇಶವ ಆಚಾರ್ಯ ಮಂಗಳೂರು ಕಳಿ ಚಂದ್ರಯ್ಯ ಆಚಾರ್ಯ ಉಪ್ರಳ್ಳಿ, ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು ಕಾರ್ಕಳ, ಗಜಾನನ ಆರ್. ಆಚಾರ್ಯ ಭಟ್ಕಳ, ಬಿ.ಎಂ.ಯದುನಂದನ ಆಚಾರ್ಯ ಬಂಗ್ರ ಮಂಜೇಶ್ವರ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ, ಬಾಲಕೃಷ್ಣ ಆಚಾರ್ಯ ಬೆಳಪು, ಎ. ಶೇಖರ ಆಚಾರ್ಯ ಕಾಪು, ಜಗದೀಶ್ ಆಚಾರ್ಯ ಕೊಲಕಾಡಿ, ಪುರೋಹಿತ್ ಜಯಕರ ಆಚಾರ್ಯ ಮೂಡುಬಿದಿರೆ, ಕೆ. ಸುಂದರ ಆಚಾರ್ಯ ಕೋಟೆಕಾರು, ಜನಾರ್ದನ ಆಚಾರ್ಯ ಆರಿಕ್ಕಾಡಿ, ಕೆ.ಪ್ರಭಾಕರ ಆಚಾರ್ಯ ಕೋಟೆಕಾರು ಮನೋಹರ ಲಕ್ಕುಂಡಿ ಹುಬ್ಬಳ್ಳಿ, ದತ್ತ ಎಂ ಆಚಾರ್ಯ ಅಂಕೋಲ, ಬಿ. ಜಗದೀಶ್ ಆಚಾರ್ಯ ಪಡುಪಣಂಬೂರು, ಅಜೇಂದ್ರ ಸ್ವಾಮಿ ಶಾಡಲಗಿರಿ,ವೈದಿಕರಾದ ಲಕ್ಷ್ಮಿಕಾಂತ ಶರ್ಮ ಬಾರ್ಕೂರು, ಶ್ರೀಧರ್ ಶರ್ಮ ಕಟಪಾಡಿ, ರಾಮಕೃಷ್ಣ ಆಚಾರ್ಯ ಆರಿಕ್ಕಾಡಿ , ವಿ.ಕೃಷ್ಣ ಆಚಾರ್ಯ ಮುಂಬೈ ಉಪಸ್ಥಿತರಿದ್ದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್ ಕಂಬಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುರೇಶ್ ಆಚಾರ್ಯ ಕಾರ್ಕಳ ವಿದ್ವಾಂಸರನ್ನು ಪರಿಚಯಿಸಿದರು.
ಕೆ.ಎಂ. ಗಂಗಾಧರ ಆಚಾರ್ಯ ಹಾಗೂ ಗೀತಾಚಂದ್ರ ಕಾರ್ಕಳ, ನಿರೂಪಿಸಿದರು. ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ವಂದಿಸಿದರು.